ಕಲ್ಲಡ್ಕ: ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಪ್ರಾಯೋಜಕತ್ವದಲ್ಲಿ ಬ್ಯಾಂಕ್ ಆಫ್ ಬರೋಡಾ ಕಲ್ಲಡ್ಕ ಶಾಖೆ, ಝಾನ್ಸಿರಾಣಿ ಲಕ್ಷೀಬಾಯಿ ಮಹಿಳಾ ಮಂಡಳಿ, ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು , ಮಂಗಳೂರು ಇದರ ಸಹಯೋಗದೊಂದಿಗೆ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರವನ್ನು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ್ ಭಟ್ ಕಲ್ಲಡ್ಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ,ನನ್ನ ಜೀವವನ್ನುಳಿಸಲು ರಕ್ತದಾನ ಮಾಡಿದ ರಕ್ತದಾನಿ ನೀವಾಗಿರಬಹುದೇ?” ಎನ್ನುವ ಧ್ಯೇಯವಾಕ್ಯದೊಂದಿಗೆ, ಪ್ರತಿ ವರ್ಷವೂ ರಕ್ತದಾನ ಶಿಬಿರ ಎನ್ನುವ ಮಹತ್ತರ ಕಾರ್ಯಕ್ರಮವನ್ನು ಮಾಡುವುದು ಅಭಿನಂದನಾರ್ಹ ಖರ್ಚು ಇಲ್ಲದೆ ಪುಣ್ಯ ಸಂಪಾದಿಸಲು ಸಾಧ್ಯ ಎಂದರು.
ಕೆ ಎಂ ಸಿ ಡಾಕ್ಟರ್ ಅಖಿಲ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ, ಕಲ್ಲಡ್ಕ ಇದರ ಲಾಂಛನವನ್ನು ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಏ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟರಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಿರಣ್ಮಯಿ, ಝಾನ್ಸಿರಾಣಿ ಲಕ್ಷೀಬಾಯಿ ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಆರ್. ಪೂಜಾರಿ, ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಗೌರವ ಅಧ್ಯಕ್ಷರಾದ ವೆಂಕಟ್ರಾಯ ಪ್ರಭು, ಉಪಸ್ಥಿತರಿದ್ದರು.
ಜಯಂತಿ ಪ್ರಾರ್ಥಿಸಿ, ಸುರಕ್ಷಾ ಸಂಗಮದ ಅಧ್ಯಕ್ಷ ನಿತಿನ್ ಕುಮಾರ್ ಸ್ವಾಗತಿಸಿದರು, ಸಂಘದ ಸಲಹಾ ಸಮಿತಿಯ ಸದಸ್ಯ ಯತಿನ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಸದಾಶಿವ ಆಚಾರ್ಯ ಧನ್ಯವಾದ ಸಮರ್ಪಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.