ಬಂಟ್ವಾಳ: ವಿಕ್ರಮ್ ಸ್ಟೋರ್ಸ್ ಬಂಟ್ವಾಳ ಇದರ ನೂತನ ಇಲೆಕ್ಟ್ರಾನಿಕ್ಸ್ ಹಾಗೂ ಗಹೋಪಯೋಗಿ ಸಲಕರಣೆಗಳ ಮಳಿಗೆಯು ಬಂಟವಾಳದ ವಲ್ಲಭಾ ಪಟೇಲ್ ರಸ್ತೆಯಲ್ಲಿರುವ ಸ್ವಂತ ಕಟ್ಟಡದಲ್ಲಿ ಜ. 17 ರಂದು ಉದ್ಘಾಟನೆಗೊಂಡಿತು.
ಪ್ರೆಸ್ಟೀಜ್, ಉಷಾ, ಸಾಮ್ಸಂಗ್ , ಎಲ್.ಜಿ, ಹುಂಡೈ, ಪಿಲಿಪ್ಸ್ , ಪೊಲಾರ್ ಇತ್ಯಾದಿ ಗೃಹ ಬಳಕೆಯ ಹಾಗೂ ಅಡುಗೆ ಮನೆಯಲ್ಲಿ ಬಳಸುವ ಹೊಸ ಮಾದರಿ ಸಲಕರಣೆಗಳು ಮಳಿಗೆಯಲ್ಲಿ ದೊರೆಯಲಿದೆ ಎಂದು ವಿಕ್ರಮ್ ಸಮೂಹ ಸಂಸ್ಥೆಗಳ ಮಾಲಕ ಬಿ. ಸರ್ವೊತ್ತಮ ಬಾಳಿಗಾ ತಿಳಿಸಿದರು.
ಗಣ್ಯರಾದ ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ದೇವಳದ ಟ್ರಸ್ಟಿ ಭಾಮಿ ನಾಗರಾಜ್ ಶೆಣೆ
, ಬಂಟ್ವಾಳ ಬಾಳಿಗಾ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ಅಚ್ಯುತ ಬಾಳಿಗ, ಪೂರ್ಣಿಮಾ ಸ್ಟೋರ್ ಮಾಲಕ ವಾಸುದೇವ ಬಾಳಿಗ, ವಿಕ್ರಮ್ ಸಮೂಹ ಸಂಸ್ಥೆಯ ಬಿ.ಸದಾಶಿವ ಬಾಳಿಗ ಹಾಗೂ ಅವರ ತಾಯಿ ರಾಧ
ನರಸಿಂಹ ಬಾಳಿಗಾ, ಬಸ್ತಿ ಮಾಧವ ಶೆಣೈ ಉಪಸ್ಥಿತರಿದ್ದರು.
ಬಂಟ್ವಾಳ ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಪ್ರಕಾಶ್ ಲಕ್ಷ್ಮಣ ಬಾಳಿಗಾ ಹಾಗೂ ತೌಹೀದ್ ಇಂಗ್ಲೀಷ್ ಮಿಡಿಯಂ ಸ್ಕೂಲ್ ಸ್ಥಾಪಕ
ಪ್ರಧಾನ ಕಾರ್ಯದರ್ಶಿ ಬಿ.ಎ. ಮೊಹಮ್ಮದ್ ಶುಭಹಾರೈಸಿದರು.