ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೇತ್ರತ್ವದಲ್ಲಿ ಜ.14 ರಿಂದ ಜ.26 ರ ವರೆಗೆ ನಿರಂತರವಾಗಿ ನಡೆಯುವ ” ಗ್ರಾಮವಿಕಾಸ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ವಿನೂತನ ಚಿಂತನೆಯ ಪಾದಯಾತ್ರೆಯ 7 ನೇ ದಿನವಾದ ಜ. 20 ರಂದು ಬಂಟ್ವಾಳದ ಇತಿಹಾಸ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡಿತು.
7ನೇ ದಿನದ ಈ ಪಾದಯಾತ್ರೆಯಲ್ಲಿ ವಿಶೇಷ ಅತಿಥಿಯಾಗಿ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿದ್ದು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ನಗರ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿ.ಪಂ.ಮಾಜಿ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಪಾದಯಾತ್ರೆ ಸಂಚಾಲಕರಾದ ಮಾದವ ಮಾವೆ, ಸುದರ್ಶನ್ ಬಜ, ದೇವಸ್ಥಾನದ ಆಡಳಿತ ಮೊಕೇಸರ ಅಶೋಕ್ ಶೆಣೈ, ಟ್ರಸ್ಟಿ ಭಾಮಿ ನಾಗೇಂದ್ರ ನಾಥ್ ಶೆಣೈ, ಭಾಮಿ ನಾರಾಯಣ ಶೆಣೈ, ನಾಗೇಂದ್ರ ವಿ.ಬಾಳಿಗ, ಗಿರೀಶ್ ಪೈ ರವೀಂದ್ರ ಪ್ರಭು, ಗಿರಿಧರ್ ಬಾಳಿಗಾ, ಮಹೇಶ್ ಬಾಳಿಗ, ರಮಾನಾಥ ಪೈ, ರೇಖ ಪೈ, ಶಶಿಕಲಾ, ಮೀನಾಕ್ಷ ಗೌಡ, ಸುರೇಶ್ ಕುಲಾಲ್, ಪ್ರಮುಖರಾದ ರಾಮ್ ದಾಸ ಬಂಟ್ವಾಳ, ಉದಯಕುಮಾರ್ ರಾವ್, ಪುರಸಭಾ ಸದಸ್ಯರುಗಳು, ಗ್ರಾಮಪಂಚಾಯತ್ ಅಧ್ಯಕ್ಷ ರುಗಳು, ಸದಸ್ಯರುಗಳು, ಕ್ಷೇತ್ರ ಸಮಿತಿ ಪ್ರಮುಖರು ಹಾಗೂ ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಅಪಾರ ಮಳೆಯಿಂದ ಹಾನಿ ಜೊತೆಗೆ ಕೊರೊನಾ ಸಂಕಷ್ಟದ ದಿನಗಳಲ್ಲಿ ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ , ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ.ಇವರ ಸಾಧನೆಯನ್ನು ಹಾಗೂ ಕೇಂದ್ರ , ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಗ್ರಾಮ ಗ್ರಾಮಗಳಲ್ಲಿ ಪಾದಯಾತ್ರೆ ಮಾಡಲಾಗುತ್ತದೆ. ಈ ದೇಶದ ನೆಲ, ಜಲ, ಸಂಸ್ಕೃತಿ ರಕ್ಷಣೆಗಾಗಿ ಬಿಜೆಪಿ ಆಡಳಿತ ಬೇಕಾಗಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯ ಅಭಿವೃದ್ಧಿ , ನವ ಬಂಟ್ವಾಳಕ್ಕೆ ಮತ್ತೊಮ್ಮೆ ರಾಜೇಶ್ ನಾಯ್ಕ್ ಅವರು ಶಾಸಕರಾಗಿ ಆಯ್ಕೆಯಾಗಬೇಕಾಗಿದೆ ಎಂದರು.