ಅಮ್ಟಾಡಿ : ಮೂಡಬಿದ್ರೆಯ ಆಳ್ವಾಸ್ ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಉತ್ಸವದ ಅಂಗವಾಗಿ ದ.22ರಿಂ ರಿಂದ ದ.26 ರವರೆಗೆ ನಡೆಯುವ ಬೃಹತ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಬಂಟ್ವಾಳ ತಾಲೂಕಿನ ಅಮ್ಟಾಡಿಯಲ್ಲಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಇವರು ದೀಪ ಬೆಳಗಿಸಿ ಚಾಲನೆ ನೀಡಿದರು.
ತಾ.ಪಂ ಸಹಾಯಕ ನಿರ್ದೇಶಕ ದಿನೇಶ್ , ಅಮ್ಟಾಡಿ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಉಪಾಧ್ಯಕ್ಷ ಕೆ.ಸುನೀಲ್ ಕುಮಾರ್ , ಪಂಜಿಕಲ್ಲು ಗ್ರಾ.ಪಂ ಅಧ್ಯಕ್ಷ ಸಂಜೀವ ಪೂಜಾರಿ ಉಪಾಧ್ಯಕ್ಷೆ ಜಯಶ್ರೀ ಹಾಗೂ ಪಿ.ಡಿಓ ನಾರಾಯಣ ಗಟ್ಟಿ , ಎರಡು ಪಂಚಾಯತ್ ಗಳ ಗ್ರಾ.ಪಂ ಸದಸ್ಯರು ,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ,ಶಾಲಾ ಶಿಕ್ಷಕರು ,ಮಕ್ಕಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿಧ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ಪ್ರೋ ಹೈದರಾಲಿ ,ಆಳ್ವಾಸ್ ಸ್ಕೌಟ್ಸ್ ಮತ್ತು ಗೈಡ್ಸ್ ನ 250 ವಿಧ್ಯಾರ್ಥಿಗಳ ಜತೆ ದೇಶದ ವಿವಿಧ ರಾಜ್ಯಗಳ ವಿಧ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ಕೈ ಜೋಡಿಸಿದರು.
ಅಮ್ಟಾಡಿ ಗ್ರಾ.ಪಂ ಪಿ.ಡಿ.ಓ ರವಿ.ಬಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಜಾಂಬೂರಿ ಸ್ವಚ್ಚತಾ ಅಭಿಯಾನದ ನೋಡಲ್ ಅಧಿಕಾರಿಗಳಾದ ಆಳ್ವಾಸ್ ನ ಅಕ್ಷಯ್ .ಕೆ ಜೈನ್ ಮೂಸಾ ಶರೀಫ್ ,ದೀಪಕ್ ಕುಮಾರ್, ಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕೆ ಸಿಬ್ಬಂದಿ ಗಣೇಶ.ಕೆ ಹಾಗೂ ಚೇತನ್ ಪೂಜಾರಿ ಸಹಕರಿಸಿದರು.