ಬಂಟ್ವಾಳ : ಮತದರಾರರ ಪಟ್ಟಿ ಪರಿಷ್ಕರಣೆಯಲ್ಲಿ ಮತದಾರರ ಹೆಸರನ್ನು ನಮೂನೆ-7 ರಲ್ಲಿ ಮತದಾರನ ಸಹಿ ಇಲ್ಲದೆ ಮೂರನೇ ವ್ಯಕ್ತಿ ಅಥವಾ ರಾಜಕೀಯ ಪ್ರೇರಿತವಾಗಿ ಕಳಚುವ ಕ್ರಮಕ್ಕೆ ವಿರೋಧವಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ಬಂಟ್ವಾಳ ಮತ್ತು ಪಾಣೆಮಂಗಳೂರು ಕಾಂಗ್ರೆಸ್ ಆಶ್ರಯದಲ್ಲಿ ಬಂಟ್ವಾಳ ತಹಶೀಲ್ದಾರ್ ಗೆ ಡಿ.8 ರಂದು ಮನವಿ ಸಲ್ಲಿಸಿದರು.
ಬಿಎಲ್‌ಒ ಅವರು ಸ್ವಯಂ ಪ್ರೇರಿತರಾಗಿ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಆಗುವುದಿಲ್ಲ. ಆದರೆ ರಾಜಕೀಯ ಪ್ರಭಾವದಿಂದ ಚುನಾವಣೆ ಆಯೋಗ ಸೂಚನೆಯನ್ನು ಮೀರಿ ಇಂತಹ ಕ್ರಮ ಆಗಬಾರದು ಎಂದು ಮನವಿಯಲ್ಲಿ ಎಚ್ಚರಿಸಿದರು ಎಂದು ತಿಳಿದು ಬಂದಿದೆ.
ಮನವಿ ಸಲ್ಲಿಸುವ ಸಂಧರ್ಭ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಶೆಟ್ಟಿ, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಪ್ರಮುಕರಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಕೆ. ಪದ್ಮನಾಭ ರೈ, ಅಬ್ಬಾಸ್‌ಅಲಿ, ಮತ್ತು ಇತರರು ಉಪಸ್ಥಿತರಿದ್ದರು.