ಅ.23- ಸಂಜೆ ಗಂಗಾ ಸ್ಮರಣ ಪೂರ್ವಕ ಜಲ ಪೂಜಾ ಜಲಪೂರಣ
ಅ-.24- ಬೆಳ್ಳಿಗೆ 5.14ಕ್ಕೆ ತೈಲಾಭ್ಯಂಜನ, ನರಕಚತುರ್ದಶಿ. ದೀಪಾವಳಿ, ಧನ -ಧಾನ್ಯ -ಲಕ್ಷ್ಮೀಪೂಜೆ, ಬಲಿಂದ್ರಪೂಜೆ.
ಅ.25- ಸಂಜೆ ಗ್ರಸ್ತಾಸ್ತ ಸೂರ್ಯಗ್ರಹಣ
ಈ ದಿನ ಬೆಳಿಗ್ಗೆ 9:00 ಗಂಟೆ ಒಳಗೆ ದೇವರ ಪೂಜೆ ಮಾಡಬಹುದು ತದನಂತರ ವಿಶೇಷ ಸಾನಿಧ್ಯ ಇರುವ ಮೂರ್ತಿಗಳಲ್ಲಿ ದರ್ಬೆಯನ್ನು ಇರಿಸಿ ಮರುದಿನ ಸೂರ್ಯೋದಯದಲ್ಲಿ ದರ್ಬೆಯನ್ನು ತೆಗೆದು ಶುದ್ದಿಗೊಳಿಸುವುದು.
ಉಡುಪಿಯಲ್ಲಿ ಗ್ರಹಣ ಸ್ಪರ್ಶ
ಸಾಯಂ ಗಂ.5.08 ನಿಮಿಷ
ಗ್ರಹಣ ಮೋಕ್ಷ ಸಾಯಂ ಗಂ.6.29 ನಿಮಿಷ
. ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಕೇತು ಗ್ರಹಣ ವು ಸಂಭವಿಸುವುದು.
ತುಲಾ, ವೃಶ್ಚಿಕ, ಮೀನ, ವೃಷಭ, ಕರ್ಕಾಟಕ ರಾಶಿಯವರಿಗೆ ಅರಿಷ್ಠ
ಕುಂಭ, ಮೇಷ, ಮಿಥುನ, ಕನ್ಯಾ ರಾಶಿಯವರಿಗೆ ಮಧ್ಯಮ
ಈ ದಿನ ಉಪಹಾರ ಮಾತ್ರ
ಭೋಜನ ಇಲ್ಲ.
ಉಪಹಾರ ಮಧ್ಯಾಹ್ನ 2 ಘಂಟೆ ಒಳಗೆ ತದ ನಂತರ ಆಹಾರ ಸೇವನೆ ಇಲ್ಲ.
ಗ್ರಹಣ ಮೋಕ್ಷ ನಂತರ ರಾತ್ರಿ 7ರ ನಂತರ ಬಾಲ ವೃದ್ದ ಆತುರರು
ಉಪಹಾರ ಸ್ವೀಕರಿಸಬಹುದು.
ಶಾಂತಿ ವಿಚಾರ
ಗ್ರಹಣ ಸಮಯದಲ್ಲಿ ಗ್ರಹಣ ಶಾಂತಿ ಹಾಗೂ ಜಪ ತಪ ಅನುಷ್ಠಾನ ವಿಷ್ಣು ಸಹಸ್ರ ನಾಮ ಪಠಣ ಮಾಡುವುದು ಉತ್ತಮ.
ಅರಿಷ್ಠ ಇರುವ ರಾಶಿಯವರು ಗ್ರಹಣ ಆರಂಭ ಕಾಲದಲ್ಲಿ ಸ್ನಾನವನ್ನು ಮಾಡಿ
ಯಥಾಯೋಗ್ಯತಾನುಸಾರ ಹುರುಳಿ (ಕುಳಿತ್ಥ) ಮತ್ತು ಗೋಧಿಯನ್ನು ಕೆಂಪು ವಸ್ತ್ರದಲ್ಲಿ ಇಟ್ಟು ವಿಷ್ಣು ಸಹಸ್ರನಾಮ ಅಥವಾ ಇತರೆ ಸ್ತೋತ್ರಗಳನ್ನು ಪಠಿಸಿ ಗ್ರಹಣ ನಂತರ ಪುನಹ ಸ್ನಾನ ಮಾಡಿ
ದಾನ ಮಾಡಬಹುದು. ( ಅರಿಷ್ಟ ನಿವೃತ್ತಿಗೆ ನವಗ್ರಹ ಸಹಿತ ಗ್ರಹಣ ಶಾಂತಿ ಮಾಡಿಸಬಹುದು)
ಈ ಕೆಳಗಿನ ಶ್ಲೋಕವನ್ನು ಗ್ರಹಣಕಾಲದಲ್ಲಿ ಪಠಿಸುವುದು.
ಶ್ಲೋಕ :
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷಭವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು :-
1. ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು.
2. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.
3 ಗ್ರಹಣದ ಸೂತಕವು ಗ್ರಹಣ ಆರಂಭದ ಒಂಬತ್ತು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.
4. ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು.
5. ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು.
6 . ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಶುದ್ದ ಜಲದಿಂದ ಮನೆಯ ಎಲ್ಲಾ ಭಾಗಗಳಲ್ಲಿಯೂ (ದೇವರ ಕೋಣೆ) ಪ್ರೋಕ್ಷಿಸ ಬಹುದು
7. ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.
8. ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆ ಅಥವ ತುಳಸಿ ಅಥವಾ ಗರಿಕೆ ಯನ್ನು ಹಾಕಿರಬೇಕು.
9. ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು.
26.10.2022 ನೇ ಬುಧವಾರ
-ಬಲಿಪಾಡ್ಯ,
ಗೋಪೂಜಾ
ಅಂಗಡಿ ಪೂಜೆ
ಸಪ್ತಋಷಿ ಸಂಗ್ರಹ