ಎನ್‌ಎಸ್‌ಎಸ್ ಬೆಂಜನಪದವು ವಾರ್ಷಿಕ ವಿಶೇಷ ಶಿಬಿರ

0

ಬಂಟ್ವಾಳ: ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ಇದರ ವಾರ್ಷಿಕ ವಿಶೇಷ ಶಿಬಿರ 2022-23 ರ ಉದ್ಘಾಟನಾ ಸಮಾರಂಭವು ಅ.6 ಶ್ರೀ ರಾಜ ರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಜರುಗಿತು.


ರಾಮಕೃಷ್ಣ, ತಪೋವನದ ಸ್ವಾಮೀಜಿಗಳಾದ ಶ್ರೀ ವಿವೇಕಾಚೈತನ್ಯನಂದರು ದೀಪ ಬೆಳಗಿಸಿ, ಉದ್ಘಾಟಿಸಿ ಈ ಶಿಬಿರವು ವಿದ್ಯಾರ್ಥಿಗಳ ಸರ್ವೋತೋಮುಖ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ ಎಂದು ಅಭಿಪ್ರಾಯ ಪಟ್ಟರು. ವಿಶ್ವ ಭಾತೃತ್ವ, ಸಮಾನತೆ&ಸೇವಾಮನೋಭಾವಕ್ಕೆ ಇಂತಹ ಶಿಬಿರದ ಅಗತ್ಯ ಇದೆ ಎಂದು ಬಣ್ಣಿಸಿದರು. ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಸ್ವಾಮೀಜಿಯವರು ಭಾರತೀಯ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಈ ಶಿಬಿರದ ಮೂಲಕ ಎಲ್ಲಡೆ ಪಸರಿಸಲಿ ಎಂದು ಹಾರೈಸಿದರು.


ಕಾಲೇಜಿನ ಪ್ರಾಚಾರ್ಯರು, ಶಿಬಿರದ ನಿರ್ದೇಶಕರರಾದ ಕವಿತಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂಜನಪದವು ಕಾಲೇಜಿನ ಕಾರ್ಯಧ್ಯಕ್ಷ ವಾಮನಚ್ಯರ್ಯ, ಪೊಳಲಿ ಶಾಲೆಯ ಕಾರ್ಯಧ್ಯಕ್ಷ ವೆಂಕಟೇಶ್ ನಾವಡ, ಕರಿಯಂಗಳ ಗ್ರಾಮ ಪಂಚಾಯತಿ ನ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪೊಳಲಿ ಶಾಲೆಯ ಮುಖ್ಯಪಾಧ್ಯಾಯ ರಾಧಾಕೃಷ್ಣಭಟ್, ಕರಿಯಂಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲಿನಿ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲಾ ಶೌಚಾಲಯವನ್ನು ಲೋಕಾರ್ಪಣೆ ಮಾಡಲಾಯಿತು.


ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಬಾಲಕೃಷ್ಣ ಎನ್ ವಿ ಸ್ವಾಗತಿಸಿ, ರವಿಚಂದ್ರ ಮಯ್ಯ ಗಣಿತ ಉಪನ್ಯಾಸಕರು ವಂದಿಸಿ, ಅರ್ಥಶಾಸ್ತ್ರ ಉಪನ್ಯಾಸಕ ನೂರ್ ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಮೇದಪ್ಪ ಜಿ ಆರ್, ಡಾ, ಸಂಧ್ಯಾ ರಾಣಿ, ಚಂದ್ರಶೇಖರ ಎಂ, ಚಂದ್ರಕಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here