‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಟಾಪರ್​ ಆದ ಕರಾವಳಿಯ ರೂಪೇಶ್‌ ಶೆಟ್ಟಿ; ರೂ.5 ಲಕ್ಷ ಬಹುಮಾನ

0

ಬಿಗ್ ಬಾಸ್ ಒಟಿಟಿ ಅಂತ್ಯಗೊಂಡಿದ್ದು, ತುಳುನಾಡಿನ ಖ್ಯಾತ ನಟ ರೂಪೇಶ್ ಶೆಟ್ಟಿ ಅಗ್ರಸ್ಥಾನ ಪಡೆಯುವುದರ ಜೊತೆಗೆ 5 ಲಕ್ಷ ರೂ. ಗೆದ್ದಿದ್ದಾರೆ. ನಟನಾಗಿ, ಆರ್​ಜೆ ಆಗಿ ರೂಪೇಶ್​ ಶೆಟ್ಟಿ ಫೇಮಸ್​. ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋಗೆ ಬಂದ ಬಳಿಕ ಅವರಿಗೆ ಇನ್ನಷ್ಟು ಜನಪ್ರಿಯತೆ ಸಿಕ್ಕಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಇದೇ ಸೆ.24ರಿಂದ ಆರಂಭವಾಗಲಿರುವ ಟಿವಿ ಸೀಸನ್‌ಗೆ ತುಳು ನಟ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಹಾಗೂ ಸಾನ್ಯ ಅಯ್ಯರ್ ತಮ್ಮ ಅದ್ಭುತ ಆಟದ ಹಿನ್ನಲೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.  ಜೊತೆಯಲ್ಲಿ ಹಳೇ ಸೀಸನ್​ನ 5 ಸ್ಪರ್ಧಿಗಳು ಕೂಡ 9ನೇ ಸೀಸನ್​ಗೆ ಎಂಟ್ರಿ ನೀಡಲಿದ್ದಾರೆ. ಅವರ ಜೊತೆ 9 ಹೊಸ ಸ್ಪರ್ಧಿಗಳಿಗೆ ಅವಕಾಶ ಸಿಗುತ್ತಿದೆ. ಅವರೆಲ್ಲರ ನಡುವೆ ರೂಪೇಶ್​ ಶೆಟ್ಟಿ ಅವರು ಯಾವ ರೀತಿ ಗುರುತಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

LEAVE A REPLY

Please enter your comment!
Please enter your name here