ಬಂಟ್ವಾಳ : ಕಳೆದ ನಲುವತ್ತು ವರ್ಷಗಳಿಂದ ಕೃಷ್ಣ ಕುಮಾರ್ ಪೂಂಜಾ ನಡೆಸುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಅವರ ಸಾಮಾಜಿಕ ಸೇವೆಗಳಿಗೆ ಶಕ್ತಿ ತುಂಬಿದೆ ಎಂದು ಜಿ. ಪಂ. ಮಾಜಿ ಸದಸ್ಯ ಎ. ಸಿ. ಭಂಡಾರಿ ಹೇಳಿದರು. ಅವರು ಸೆ.1ರಂದು ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಸೇವಾಂಜಲಿ ಸಭಾಂಗಣದಲ್ಲಿ ಪೂಜಿಸಲಾದ 40ನೇ ವರ್ಷದ ಗಣಪತಿ ಉತ್ಸವ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಅವರ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ರಾಷ್ಟ್ರ ಪುರಸ್ಕಾರ ಸಿಗಲಿ. ಎಲ್ಲರನ್ನು ಕಟ್ಟಿಕೊಂಡು, ಒಬ್ಬ ವ್ಯಕ್ತಿಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳು ಅಭಿನಂದನೀಯ ಎಂದರು. ಮಂಗಳೂರು ಶ್ರೀ ಅಂಬಾ ಮಹೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಸೀತಾರಾಮ ಎ. ಮುಖ್ಯ ಅತಿಥಿಯಾಗಿ ಮಾತನಾಡಿ ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ್, ಫರಂಗಿಪೇಟೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಕಬೇಲ, ಟ್ರಸ್ಟಿ ಜಯರಾಜ್ ಕರ್ಕೇರ ಉಪಸ್ಥಿತರಿದ್ದರು.
ಅರ್ಜುನ್ ಪೂಂಜಾ ಸ್ವಾಗತಿಸಿ, ಸಮಿತಿ ಕಾರ್ಯದರ್ಶಿ ಕೆ. ಕೃಷ್ಣಕುಮಾರ ಪೂಂಜ ಪ್ರಸ್ತಾವನೆ ನೀಡಿದರು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ದಿನಕರ ಕರ್ಕೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.