ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಸ.ಹಿ.ಪ್ರಾ.ಶಾಲೆ ನೆಟ್ಲ ಸಹಶಿಕ್ಷಕ ಪ್ರವೀಣ್ ಬಿ.

0

ಬಂಟ್ವಾಳ:ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸ.ಹಿ.ಪ್ರಾ.ಶಾಲೆ ನೆಟ್ಲ ಸಹಶಿಕ್ಷಕ ಪ್ರವೀಣ್ ಬಿ ಸ್ವೀಕರಿಸಿದ್ದಾರೆ. 1999 ರಂದು ಶಿಕ್ಷಕ ವೃತ್ತಿಗೆ ಸೇರಿ ಕಳೆದ 23 ವಷ೯ಗಳಿಂದ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶಾಲೆಗಾಗಿ ಬಹಳಷ್ಟು ಶ್ರಮಿಸುತ್ತಿದ್ದು, ಊರವರ, ಶಾಲಾ ಹಿರಿಯ ವಿಧ್ಯಾರ್ಥಿಗಳ, ಪೋಷಕರ, ಸಹೊದ್ಯೋಗಿಗಳ ಜೊತೆಗೂಡಿ ಶಾಲೆಗೆ ಮೈದಾನ, ಶಾಲಾ ಹೆಸರಿಗೆ ಪಹಣಿ ಪತ್ರ,ರಂಗಮಂದಿರ,ನಲಿಕಲಿ ಮತ್ತು ಇತರ ತರಗತಿಗಳಿಗೆ ಪೀಠೋಪಕರಣ, ದಾನಿಗರ ಸಹಾಯದಿಂದ ಶಾಲಾಶೈಕ್ಷಣಿಕ ಅಭಿವೃದ್ಧಿಗೆ ಕಂಪ್ಯೂಟರ್, ಪ್ರೋಜೆಕ್ಟರ್,ಮುಂತಾದ ಸಲಕರಣೆಗಳು, ಕೊರೋನ ಸಮಯದಲ್ಲಿ ಮಕ್ಕಳೊಂದಿಗೆ ಶೈಕ್ಷಣಿಕವಾಗಿ ನಿರಂತರವೂ ಸಂಪಕ೯ದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ನೇತೃತ್ವದಲ್ಲಿ ಶಾಲೆಯ ಕಳೆದ ಎರಡು ವಷಗಳಿಂದ ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿ ದೊರಕಿದೆ, ಮಕ್ಕಳೊಂದಿಗೆ ರಂಗ ತರಬೇತಿ, ಕ್ರೀಡಾತರಬೇತಿಯಂತಹ ಹಲವಾರು ಕಾಯ೯ಕ್ರಮಗಳನ್ನು ನಡೆಸಿಕೊಂಡು ಬಂದಿರುವುದನ್ನು ಗಮನಿಸಿ ಅದರ ಅಂಗವಾಗಿ 2022-23 ನೇ ಶೈಕ್ಷಣಿಕ ವಷ೯ದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ದೊರಕಿದೆ.

LEAVE A REPLY

Please enter your comment!
Please enter your name here