ಹೊಸ ದಾಖಲೆಗೆ ಸಿದ್ಧತೆಯಾಗುತ್ತಿದೆ ಅಯೋಧ್ಯೆ ದೀಪೋತ್ಸವ ; 14 ಲಕ್ಷ ದೀಪ ತಯಾರಿ

0

ದೀಪಾವಳಿ ಪ್ರಯುಕ್ತ ಉತ್ತರ ಪ್ರದೇಶದ ಅಯೋಧ್ಯೆಯ ಸರಯು ನದಿ ತೀರದಲ್ಲಿ ಎರಡು ತಿಂಗಳ ಕಾಲ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ನಡೆಯುವ ದೀಪೋತ್ಸವಕ್ಕೆ ಈ ಬಾರಿ 14 ಲಕ್ಷ ದೀಪಗಳ ತಯಾರಿಕೆ ನಡೆಯುತ್ತಿದೆ. ಮುಸ್ಸಂಜೆ ವೇಳೆಯಲ್ಲಿ ಜನರು ಸ್ವಯಂಪ್ರೇರಣೆಯಿಂದ ಬಂದು ನದಿಯ ತೀರದುದ್ದಕ್ಕೂ ಮಣ್ಣಿನ ದೀಪಗಳನ್ನು ಬೆಳಗುತ್ತಾರೆ.

2021ರಲ್ಲಿ 9 ಲಕ್ಷ ಹಣತೆಗಳನ್ನು ಬೆಳಗುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲಾಗಿತ್ತು. ಈ ವರ್ಷ 14 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಹೊಸ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here