ಕಡೇಶಿವಾಲಯ: ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಮಂಗಳೂರು ಗ್ರಾಮಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ , ಬಂಟ್ವಾಳ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಕಡೇಶಿವಾಲಯ ಕಲ್ಲಾಜೆಯಲ್ಲಿರುವ ಅಮೃತ ಸರೋವರವು ಅಮೃತ ಸರೋವರ ಯೋಜನೆಗೆ ಆಯ್ಕೆಯಾಗಿದ್ದು, ಆ.15ರಂದು ಕೆರೆಯ ಅಭಿವೃದ್ಧಿಗೆ ಚಾಲನೆ ದೊರಕಿತು. ಸ್ವಾತಂತ್ರಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಿವೃತ್ತ ಸೈನಿಕ ವಿದ್ಯಾಧರ್ ಪೂಜಾರಿ ಧ್ವಜಾರೋಹಣ ಮಾಡಿ ಮಾತನಾಡಿ, ಅನೇಕ ಹೋರಾಟಗಾರರ ಹೋರಾಟದ ಫಲವಾಗಿಯೇ ನಮಗೆ ಸ್ವಾತಂತ್ರ್ಯ ದೊರಕಿದೆ. ಸ್ವಾತಂತ್ರ್ಯ ಎನ್ನುವುದು ನಮ್ಮ ಹಕ್ಕು ಅದು ಸ್ವೇಚ್ಛಾಚಾರವಲ್ಲ. ವಿದೇಶಿಗರ ಇತಿಹಾಸ ತಿಳಿಯುವುದಕ್ಕಿಂತ ನಮ್ಮ ದೇಶದ ನೈಜ ಇತಿಹಾಸವನ್ನು ವಿದ್ಯಾರ್ಥಿಗಳು, ಸಮಾಜ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಅನೇಕ ಸಂಘ ಸಂಸ್ಥೆಯ ಪ್ರಮುಖರು, ಸ.ಹಿ.ಪ್ರೌಢಶಾಲೆ ಕಡೇಶಿವಾಲಯದ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮವನ್ನು ಕಡೇಶಿವಾಲಯ ಗ್ರಾ.ಪಂ ಪಿಡಿಒ ಸುನೀಲ್ ಕುಮಾರ್ ನಿರ್ವಹಿಸಿದರು. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರಭಾತ್ ಬೇರಿ ಗಮನ ಸೆಳೆಯಿತು.