ಬಂಟ್ವಾಳ : ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ.16ರಂದು ನಡೆದ ಉಚಿತ ಕಣ್ಣಿನ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ ಶಿಬಿರವನ್ನು ಮಾಣಿ ವೈದ್ಯಧಿಕಾರಿ ಡಾ ಶಶಿಕಲಾ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಣಿ ಗ್ರಾ. ಪಂ. ಅಧ್ಯಕ್ಷ ಬಾಲಕೃಷ್ಣ ಆಳ್ವ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶಿಬಿರದ ಜೊತೆ ಜನರ ಸ್ಪಂದನೆ ಉತ್ತಮವಾಗಿದೆ. ಸಮಾಜಮುಖಿ ಕಾರ್ಯಕ್ರಮದಲ್ಲಿ ಎಲ್ಲರ ಶ್ರಮ ಇದೆ. ಗುಣಮಟ್ಟದ ಕನ್ನಡಕ ಇಲ್ಲಿನ ಉಚಿತ ಶಿಬಿರದಲ್ಲಿ ಸಿಗಲಿದೆ ಎಂದರು. ಮಾಜಿ ರೋಟರಿ ಉಪ ಗವರ್ನರ್ ಕಿರಣ್ ಹೆಗ್ಡೆ ಮಾತನಾಡಿ ಅಂಧತ್ವ ನಿವಾರಣೆ ಮಾಹಿತಿ ಜನಸಾಮಾನ್ಯರಿಗೆ ನಿರಂತರ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಶಿಬಿರ ಸಂಯೋಜಕ ಲ.ಡಾ. ಮನೋಹರ್ ರೈ , ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ಬಂಟ್ವಾಳ ಅಧ್ಯಕ್ಷ ರಾಜಾ ಬಂಟ್ವಾಳ್,ಡಾ. ಅನಿಲ್, ಮಾಣಿ ಗ್ರಾ ಪಂ. ಉಪಾಧ್ಯಕ್ಷೆ ಪ್ರೀತಿ ಡಿನ್ನ ಪಿರೇರ, ಇಬ್ರಾಹಿಂ ಮಾಣಿ, ಲಯನ್ ಸ್ಥಾಪಕ ಅಧ್ಯಕ್ಷ ಎಂಜೆಎಫ್ ಲಯನ್ ಗಂಗಾಧರ ರೈ, ಮೆಲ್ವಿನ್ ಪಿರೇರಾ ಮಾರ್ಟೀಸ್, ನಿಕಟಪೂರ್ವ ಅಧ್ಯಕ್ಷರಾದ ಎಂಜೆಎಫ್ ಬಾಲಕೃಷ್ಣ ಶೆಟ್ಟಿ, ಡಾ ಶ್ರೀನಾಥ್ ಆಳ್ವ,ಉಪಾಧ್ಯಕ್ಷ ಅಕ್ಷಯ ಹೆಗ್ಡೆ, ಕೋಶಾಧಿಕಾರಿ ಕೂಸಪ್ಪ ಪೂಜಾರಿ, ಚಾರ್ಟರ್ ಸದಸ್ಯ ಬಿ. ಎಂ. ಗಂಗಾಧರ ರೈ ಉಪಸ್ಥಿತರಿದ್ದರು. ಅಂಗಾಂಗ ದಾನದ ಬಗ್ಗೆ ಅರೋಗ್ಯ ಇಲಾಖೆಯ ಪದ್ಮಲತಾ ಮಾಹಿತಿ ನೀಡಿದರು ಡಾ.ಶಾಂತರಾಜ್ ಸ್ವಾಗತಿಸಿದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ವಂದಿಸಿದರು ಮಾಣಿ ಲಯನ್ ಅಧ್ಯಕ್ಷ ಉಮೇಶ್ ಪಿ.ಕಾರ್ಯಕ್ರಮ ನಿರ್ವಹಿಸಿದರು.