ಅನಂತಾಡಿ, ನೆಟ್ಲಮುಡ್ನೂರು ಗ್ರಾ.ಪಂ ಉಪಚುನಾವಣೆಯ ಫಲಿತಾಂಶ ಪ್ರಕಟ

0

ಅನಂತಾಡಿಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಶಶಿಕಲಾ ಹರಿಣಾಕ್ಷ – ನೆಟ್ಲಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಜಗದೀಶ್‌ ಪೂಜಾರಿ ಮಿತ್ತಕೋಡಿಗೆ ಗೆಲುವು

ಬಂಟ್ವಾಳ: ಬಂಟ್ವಾಳ ತಾಲೂಕಿನ ಅನಂತಾಡಿ ಹಾಗೂ ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ತೆರವಾದ ತಲಾ ಒಂದು ಸ್ಥಾನಗಳಿಗೆ ಫೆ 25 ರಂದು ನಡೆದ ಉಪ ಚುನಾವಣೆಯ ಮತ ಎಣಿಕೆ ಬಂಟ್ವಾಳ ಆಡಳಿತ ಸೌಧದಲ್ಲಿ ಫೆ.28ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದ್ದು ಅನಂತಾಡಿಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಶಶಿಕಲಾ ಹರಿಣಾಕ್ಷ ಗೆಲುವು ಸಾಧಿಸಿದರೆ, ನೆಟ್ಲಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಜಗದೀಶ್‌ ಪೂಜಾರಿ ಮಿತ್ತಕೋಡಿರವರು ವಿಜಯಿಯಾಗಿದ್ದಾರೆ‌.

ಅನಂತಾಡಿ ಗ್ರಾಮದ ಎರಡನೇ ವಾರ್ಡ್ ನಲ್ಲಿ ವಿಜಯಿಯಾಗಿದ್ದ ಅಭ್ಯರ್ಥಿ ಸರಕಾರಿ ಉದ್ಯೋಗಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅವರ ಸ್ಥಾನ ತೆರವಾಗಿತ್ತು. ಅದೇ ರೀತಿ ನೆಟ್ಲ ಮುಡ್ನೂರಿನಲ್ಲಿ ಎರಡನೇ ವಾರ್ಡ್ ನ ಸದಸ್ಯರು ಅಕಾಲಿಕ ಮರಣವನ್ನಪ್ಪಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.

ಅನಂತಾಡಿ ಗ್ರಾಮ ಪಂಚಾಯತ್ ನ ಒಟ್ಟು 667 ಮತದಾರರ ಪೈಕಿ 500 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಅನಂತಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿಕಲಾ 254 ಮತವನ್ನು‌ ಪಡೆದುಕೊಂಡರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೀತಾ ಚಂದ್ರ ಶೇಖರ್ ರವರು
242 ಮತಗಳನ್ನು ಪಡೆದಿದ್ದಾರೆ.
4 ಮತಗಳು ತಿರಸ್ಕೃತಗೊಂಡಿದೆ. ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಈ ಸ್ಥಾನವನ್ನು 12 ಮತ ಅಂತರದಲ್ಲಿ ಕಾಂಗ್ರೆಸ್ ಕೈವಶ ಮಾಡಿಕೊಂಡಿದೆ.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ಒಟ್ಟು 816 ಮತದಾರರ ಪೈಕಿ 596 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಜಗದೀಶ್‌ ಪೂಜಾರಿ ಮಿತ್ತಕೋಡಿರವರು 353 ಮತವನ್ನು ಪಡೆದುಕೊಂಡರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರಿಣಾಕ್ಷಿರವರು
239 ಮತಗಳನ್ನು ಪಡೆದಿದ್ದಾರೆ.
4 ಮತಗಳು ತಿರಸ್ಕೃತಗೊಂಡಿದೆ. ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಈ ಸ್ಥಾನವನ್ನು 114 ಮತ ಅಂತರದಲ್ಲಿ ಮತ್ತೆ ಬಿಜೆಪಿ ಉಳಿಸಿಕೊಂಡಿದೆ.

LEAVE A REPLY

Please enter your comment!
Please enter your name here