ಬಂಟ್ವಾಳ: ಬೆಂಜನಪದವು ಸರಕಾರಿ ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ 2022-23 ಸಾಲಿನ ಕಾರ್ಯಚಟುವಟಿಕೆಯನ್ನು ಆ. 8ರಂದು ಫಾದರ್ ಮುಲ್ಲರ್ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ಘಟಕ ಮೆನೇಜರ್ ಜಗದೀಶ ಕೆ. ಯಡಪಡಿತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಜೀವನದ ಎಲ್ಲಾ ಕಷ್ಟಗಳನ್ನು ಕಠಿಣ ಪರಿಶ್ರಮದ ಮೂಲಕ ಎದುರಿಸಿ ಯಶಸ್ಸು ಸಾಧಿಸಬೇಕು. ವಿದ್ಯಾರ್ಥಿ ಸ್ವಯಂಸೇವಕರು ಸಾಧನೆಯ ಮೂಲಕ ಮುಂದಕ್ಕೆ ಬಂದಾಗ ಅನುಭವದ ಸಂಪನ್ನತೆಯನ್ನು ಪಡೆಯುತ್ತೀರಿ ಎಂದರು.
ಉಪ ಪ್ರಾಂಶುಪಾಲ ಅನಂತ ಪದ್ಮನಾಭ, ಕಾಲೇಜು ಅಭಿವೃದ್ದಿ ಸದಸ್ಯರಾದ ಉಮೇಶ್ ಸಾಲಿಯಾನ್, ಸುರೇಶ್ ಸಾಲಿಯಾನ್, ಪ್ರೇಮ್‌ಜಿತ್, ಉಪನ್ಯಾಸಕರಾದ ಡಾ. ಸಂಧ್ಯಾರಾಣಿ, ಆಶಾ ಮತ್ತು ಸ್ವಯಂಸೇವಕರು ಉಪಸಿತರಿದ್ದರು. ಕಾಲೇಜಿನ ಪ್ರಾಚಾರ್ಯೆ ಕವಿತಾ ಸ್ವಾಗತಿಸಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಬಾಲಕೃಷ್ಣ ಎನ್.ವಿ. ವಂದಿಸಿದರು. ನೂರ್ ಮಹಮ್ಮದ್ ನಿರೂಪಿಸಿದರು. ಎನ್‌ಎಸ್‌ಎಸ್ ಪ್ರತಿಜ್ಞೆ ಯನ್ನು ಲೋಕೇಶ್, ರವಿಚಂದ್ರ ಮಯ್ಯ ನೆರವೇರಿಸಿದರು.