ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ- ದೀಪ ಪ್ರದಾನ ಕಾರ್ಯಕ್ರಮ

0

ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್‍ಯಕ್ರಮ ಮಧುಕರ ಸಭಾಂಗಣದಲ್ಲಿ ನಡೆಯಿತು. “ವಿವೇಕಾನಂದ ವಿದ್ಯಾವರ್ಧಕ ಸಂಘದ ಪುತ್ತೂರು ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ ಪ್ರಾಸ್ತವಿಕ ಮಾತನಾಡಿ “ಮರ ಹೇಗೆ ಬೇರಿನ ಮೂಲಕ ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿ ತನ್ನ ಮರ, ಕಾಂಡ ಹೂಗಳಿಗೆ ತಲುಪಿಸುತ್ತದೋ ಅದೇ ರೀತಿ ಶ್ರೀರಾಮ ವಿದ್ಯಾಕೇಂದ್ರವು ಶಿಶು ಮಂದಿರದಿಂದ ಉನ್ನತ ಶಿಕ್ಷಣದವರೆಗೆ ಸಂಸ್ಕಾರದ ಜೊತೆಗೆ ಆಧುನಿಕತೆಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ” ಎಂದರು.


ಕಾರ್‍ಯಕ್ರಮದ ಪ್ರಾರಂಭದಲ್ಲಿ ನೂತನವಾಗಿ ಪಾರಂಭಗೊಂಡ ಗಣಿತ ಪ್ರಯೋಗಾಲಯವನ್ನು “ಸಾಮಾಜಿಕ ಕಾರ್ಯಕರ್ತೆ” ಪ್ರತಿಭಾ ಅರುಣ್‌ ಇವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು “ಜೀವನದಲ್ಲಿ ವಿದ್ಯಾರ್ಥಿಗಳು ಕನಸನ್ನು ಕಾಣಬೇಕು. ಆ ಕನಸನ್ನು ಸಾಧಿಸಲು ಕಠಿಣ ಪರಿಶ್ರಮ ಪಡಬೇಕು.ಸಾಧಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಬೇಕು” ಎಂದು ಕಿವಿಮಾತು ಹೇಳಿದರು.


“ಪವರ್ ಪ್ಯಾಕ್ ಇಂಡಸ್ಟ್ರೀಸ್” ಮಂಗಳೂರು ಇದರ ಆಡಳಿತ ನಿರ್ದೇಶಕರಾದ ಪ್ರಜ್ವಲ್ ಪಿ.ಶೆಟ್ಟಿ ಇವರು”ಜೀವನದಲ್ಲಿ ಪ್ರತಿಯೊಂದು ಪ್ರಯತ್ನವು ಫಲ ಕೊಡಬೇಕಾಗಿಲ್ಲ ಆದರೆ ಸೋತಾಗ ಕುಗ್ಗದೆ ,ಗೆದ್ದಾಗ ಹಿಗ್ಗದೆ ಸತತವಾಗಿ ಶಾಂತಿಯಿಂದ ಪ್ರಯತ್ನ ಪಟ್ಟರೆ ಯಶಸ್ಸು ಖಚಿತವಾಗಿ ಸಿಗುತ್ತದೆ” ಎಂದರು.


“ಅಂತರ್ಜಲ್ ಪ್ರೈವೇಟ್ ಲಿಮಿಟೆಡ್”ಮಂಗಳೂರು ಇದರ ಆಡಳಿತ ನಿರ್ದೇಶಕ ಆದಿತ್ಯ ಸ್ವರೂಪ “ವಿದ್ಯಾರ್ಥಿಗಳಿಗೆ ಜೀವನದ ಪ್ರತಿಯೊಂದು ಹಂತದಲ್ಲಿ ಆತ್ಮಬಲ ಮುಖ್ಯ.ಆತ್ಮ ಬಲವನ್ನು ಹಿರಿಯರಿಂದ ಮತ್ತು ಶಾಲೆಯಿಂದ ಸಂಪಾದಿಸಿದ ಗೆಳೆಯರಿಂದ ಪಡೆಯುತ್ತೀರಿ.ನೀವು ಎಷ್ಟೇ ಎತ್ತರಕ್ಕೆ ಬೆಳೆದರು ಪ್ರತಿಯೊಂದು ಹಂತದಲ್ಲಿ ಗೆಳೆತನವು ನಿಮ್ಮ ಜೊತೆ ಸದಾ ಇರುತ್ತದೆ” ಎಂದರು.


ಹತ್ತನೇ ತರಗತಿ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ತಿಲಕ ಧಾರಣೆ ಮಾಡಿಸಿಕೊಂಡರು.10 ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪ ಪ್ರಧಾನ ಹಾಗೂ ತಮ್ಮ ಕೊಡುಗೆಯನ್ನು ಸಂಸ್ಥೆಯ ಹಿರಿಯರಿಗೆ ಹಸ್ತಾಂತರಿಸಿದರು.


ಕ್ರೀಡೋತ್ಸವದಲ್ಲಿ ಕೂಪಿಕಾ ಪ್ರದರ್ಶನ ಮಾಡಿದ ಹರ್ಷಿತಾಳಿಗೆ ಗೋವಾ ರಾಜ್ಯದ ಮುಖ್ಯಮಂತ್ರಿ ಕಳುಹಿಸಿದ ಬಹುಮಾನವನ್ನು ಈ ಕಾರ್‍ಯಕ್ರಮದಲ್ಲಿ ವಿತರಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಉಡುಪಿ ಇದರ ಉಪಾಧ್ಯಕ್ಷ ಎ.ಕಿರಣ್‌ಕೊಡ್ಗಿ, ಸಾವಿತ್ರಿ ದೇವಿ ಮೆಮೋರಿಯಲ್‌ಟ್ರಸ್ಟ್‌ ಇದರ ಆಡಳಿತ ನಿರ್ದೇಶಕ ವಿಶ್ವಾಸ್‌ ಯು.ಎಸ್. ರಾವ್, ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್.ಎನ್, ಕಮಲ ಪ್ರಭಾಕರ್ ಭಟ್, ಆಡಳಿತ ಮಂಡಳಿ ಸದಸ್ಯೆ ಲಕ್ಷ್ಮಿರಘರಾಜ್, ಪ್ರೌಢಶಾಲೆಯ ಆಡಳಿತ ಅಧಿಕಾರಿ ಶಾಂಭವಿ,ಮುಖ್ಯೋಪಾಧ್ಯಾಯ ಗೋಪಾಲ.ಎಂ ಹಾಗೂ ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಎಲ್ಲಾ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು-ಶಿಕ್ಷಕೇತರ ವೃಂದ, ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿಗಳಾದ ನಿಖಿತಾ ನಿರೂಪಿಸಿ, ಶ್ರದ್ಧಾ ಸ್ವಾಗತಿಸಿ, ಧನ್ಯಶ್ರೀ ವಂದಿಸಿದರು.ಅನುಶಾ ಪ್ರೇರಣಾ ಗೀತೆ ಹಾಡಿದರು.

LEAVE A REPLY

Please enter your comment!
Please enter your name here