ಇರಾ : ಹಾಡಹಗಲೇ ಮನೆಯಿಂದ ಚಿನ್ನಾಭರಣ ಕಳವು

0

ಬಂಟ್ವಾಳ : ಹಾಡಹಗಲು ಮನೆಯ ಬೀಗ ತೆಗೆದು ಲಕ್ಷಾಂತರ ರೂ. ಮೌಲ್ಯದ ನಗ ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ. ಮನೆಯಲ್ಲಿಟ್ಟಿದ್ದ ಚಿನ್ನದ ಬೆಂಡೊಲೆ, ಉಂಗುರ, ಹವಳದ ಸರ, ಕರಮಣಿ ಸರ, ಕೈ ಬಳೆ ಸೇರಿದಂತೆ ಒಟ್ಟು 93ಗ್ರಾಂ ನ 3,11,550 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಮನೆಯ ಮಾಲಕಿ ರೋಹಿನಿ ಎಂಬವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ರೋಹಿನಿ ಮತ್ತು ಅವರ ಪತಿ ಕೆಲಸಕ್ಕೆ ಹೋಗುವ ವೇಳೆ ಮನೆಯ ಬೀಗದ ಕೈ ಯನ್ನು ಬಚ್ಚಲು ಕೋಣೆಯಲ್ಲಿ ಇಟ್ಟು ಹೋಗುತ್ತಿದ್ದರು. ಎಂದಿನಂತೆ ನಿನ್ನೆಯೂ ಬಚ್ಚಲು ಕೋಣೆಯಲ್ಲಿ ಕೀ ಇರಿಸಿ ಕೆಲಸಕ್ಕೆ ಹೋದ ದಂಪತಿಗಳು ಬರುವ ವೇಳೆಗೆ ಕಳ್ಳರು ಮನೆಯ ಬೀಗ ತೆಗೆದು ಚಿನ್ನ ಕಳವು ಮಾಡಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿರುವುದು ಗಮನಕ್ಕೆ ಬಂದಿದೆ. ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ,

LEAVE A REPLY

Please enter your comment!
Please enter your name here