ವಿಟ್ಲ: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಇತ್ತೀಚೆಗೆ ಗೂಡ್ಸ್ ಸಾರಿಗೆ ವಾಹನಕ್ಕೆ ರಿಪ್ಲೇಕ್ಟ್ ಅಳವಡಿಸಿವುದನ್ನು ಖಾಸಗಿಯವರಿಗೆ ಗುತ್ತಿಗೆ ಕೊಟ್ಟ ಹಿನ್ನೆಲೆಯಲ್ಲಿ ಅವರು ದುಪ್ಪಟ್ಟು ಹಣ ಒಡೆದು ಸ್ಟಿಕ್ಕರನ್ನು ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಗೂಡ್ಸ್ ವಾಹನ ಮಾಲಕರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಮಾಹಿತಿ ಅರಿತ ಮಾಜಿ ಸಚಿವ ರಮಾನಾಥ ರೈರವರು ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಗೂಡ್ಸ್ ಸಾರಿಗೆ ವಾಹನಕ್ಕೆ ರಿಪ್ಲೇಕ್ಟ್ ಅಳವಡಿಸಿವುದನ್ನು ಖಾಸಗಿಯವರಿಗೆ ಗುತ್ತಿಗೆ ಕೊಟ್ಟ ಹಿನ್ನೆಲೆಯಲ್ಲಿ ಅವರು ಇನ್ನೂರರಿಂದ ಮುನ್ನೂರು ರೂಪಾಯಿಗೆ ಅಳವಡಿಸಲಾಗುವ ಸ್ಟಿಕ್ಕರನ್ನು 1700ರೂಪಾಯಿಗೆ ಏರಿಸಿದ್ದು, ಘನ ಸಾರಿಗೆ ವಾಹನಗಳಿಗೆ 3,500 ಸಾವಿರದಿಂದ 5,000 ವರೆಗೆ ದರ ನಿಗದಿ ಪಡಿಸಿರುವುದು ಗೂಡ್ಸ್ ವಾಹನ ಮಾಲಕರಿಗೆ ಬಹಳಷ್ಟು ಸಮಸ್ಯೆಯಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಮಾಜಿ ಸಚಿವ ರಮಾನಾಥ ರೈ ರವರು ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅವರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ , ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ರಾಜೀವಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಪ್ರಮುಖರಾದ ಪದ್ಮನಾಭ ರೈ, ಅಬ್ಬಾಸ್ ಅಲಿ, ಲೋಕೇಶ್ ಪೂಜಾರಿ, ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.