ಬೆಂಗಳೂರು: ಹಿಜಾಬ್ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಮ್ಮೆ ಧರ್ಮ ಸಂಘರ್ಷ ಎದುರಾಗಿದ್ದು, ಗಣೇಶ ಹಬ್ಬದ ಹೆಸರಿನಲ್ಲಿ ವಕ್ಫ್ ಬೋರ್ಡ್ ಶಿಕ್ಷಣ ಇಲಾಖೆ ಮುಂದೆ ಹೊಸ ಬೇಡಿಕೆ ಇಟ್ಟಿದ್ದು, ಗಣೇಶ ಹಬ್ಬಕ್ಕೆ ಅನುಮತಿ ಇದೆ ಎಂದಾದರೆ ಶಾಲೆಗಳಲ್ಲಿ ನಮಾಜ್‌ಗೂ ಅವಕಾಶ ಕೊಡಿ ಎಂದು ಆಗ್ರಹಿಸಿದೆ. ಶಾಲೆಯಲ್ಲಿ ಇಸ್ಲಾಮಿಕ್ ಧಾರ್ಮಿಕ ಅವಕಾಶ ನೀಡಬೇಕು ಎಂದು ವಕ್ಫ್ ಬೋರ್ಡ್ ಶಿಕ್ಷಣ ಇಲಾಖೆ ಮುಂದೆ ಹೊಸ ಬೇಡಿಕೆ ಇಟ್ಟಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅನುಮತಿ ನೀಡಿಲ್ಲ, ಅವಕಾಶ ನೀಡುವುದೂ ಇಲ್ಲ. ಯಾವುದೇ ಕಾರಣಕ್ಕೂ ಯಾವುದೇ ಧರ್ಮದ ಆಚರಣೆಗೆ ಸರ್ಕಾರ ಅವಕಾಶ ನೀಡುವುದಿಲ್ಲ. ವಕ್ಫ್ ಬೋರ್ಡ್ ಬೇಡಿಕೆಗಳನ್ನು ಸರ್ಕಾರ ಪುರಸ್ಕರಿಸುವುದಿಲ್ಲ. ಶಾಲೆಗಳಲ್ಲಿ ಗಣಪತಿ ಹಬ್ಬ ಆಚರಣೆ ಸರ್ಕಾರ ಜಾರಿಗೆ ತಂದಿದ್ದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಶಾಲೆಗಳಲ್ಲಿ ಗಣಪತಿ ಮೂರ್ತಿ ಇಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ