ರಷ್ಯಾ : 10 ಮಕ್ಕಳನ್ನು ಹೆತ್ತರೆ 13 ಲಕ್ಷ!

0


ರಷ್ಯಾ ಪುಟಿನ್: ರಷ್ಯಾದಲ್ಲಿ 10ನೇ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬದಂದು 13 ಲಕ್ಷ ಹಣವನ್ನು ರಷ್ಯಾ ಸರ್ಕಾರ ನೀಡಲಿದೆ. ಜೊತೆಗೆ ಉಳಿದ ೯ ಮಕ್ಕಳು ಬದುಕಿರಬೇಕು ಎಂಬ ನಿಯಮವನ್ನೂ ಜಾರಿಮಾಡಲಾಗಿದೆ. ಇಡೀ ಜಗತ್ತೇ ಜನಸಂಖ್ಯೆ ಕಡಿಮೆ ಮಾಡಿಕೊಳ್ಳುವ ಕುರಿತು ತಲೆಬಿಸಿಯಲ್ಲಿದ್ದರೆ ರಷ್ಯಾ ಮಾತ್ರ ಪಕ್ಕಾ ಉಲ್ಟಾ ಯೋಚನೆ ಮಾಡುತ್ತಿದೆ ! ರಷ್ಯಾದಲ್ಲಿ 10 ಮಕ್ಕಳನ್ನು ಹೆತ್ತವರಿಗೆ 10 ರೂಬಲ್ ಬಹುಮಾನವನ್ನು ಘೋಷಣೆ ಮಾಡಲಾಗಿದೆ. 10 ರೂಬಲ್ ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 10 ಲಕ್ಷ ! ರಷ್ಯಾದಲ್ಲಿ ಸಾಂಪ್ರದಾಯಿಕ ಮನಸ್ಥಿತಿ ಹೊಂದಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದೇ ರಷ್ಯಾ ಸರ್ಕಾರದ ಚಿಂತೆಯಾಗಿದೆ.

ಸಾಂಪ್ರದಾಯಿಕ ಮನಸ್ಥಿತಿ ಹೊಂದಿರುವವರ ಸಂಖ್ಯೆ ಹೆಚ್ಚಿಸಬೇಕು ಎಂಬ ಉದ್ದೇಶಕ್ಕೆ ಈ ಯೋಜನೆ ಘೋಷಣೆ ಮಾಡಲಾಗಿದೆ. ಆದರೆ ಈ ಯೋಜನೆಯನ್ನು ವ್ಲಾದಿಮಿರ್ ಪುಟಿನ್ ಸರ್ಕಾರದ ಹತಾಶ ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ರಷ್ಯಾದಲ್ಲಿ ಜನಸಂಖ್ಯೆ ಕುಸಿಯುತ್ತಲೇ ಇದೆ. ವಿಶ್ವದ ಅತಿದೊಡ್ಡ ದೇಶವಾಗಿರುವ ರಷ್ಯಾ ಜನಸಂಖ್ಯೆಯಲ್ಲಿ ಮಾತ್ರ ಹಿಂದಿದೆ. ಹೀಗಾಗಿ ವಿವಿಧ ಸಮಸ್ಯೆಗಳನ್ನೂ ಸಹ ರಷ್ಯಾ ಎದುರಿಸುತ್ತಿದೆ.

ರಷ್ಯಾ ರಾಜಕೀಯ ಮತ್ತು ಭದ್ರತಾ ತಜ್ಞೆ ಡಾ ಜೆನ್ನಿ ಮಾಥರ್ಸ್‌ ಅವರು ಟೈಮ್ಸ್‌ ರೇಡಿಯೋ ಜೊತೆ ಮಾತನಾಡಿದ್ದು, ರಷ್ಯಾದ ಹೊಸ ಘೋಷಣೆ ‘ಮದರ್‌ ಹೀರೊಯಿನ್‌’ ಇಳಿಕೆ ಕಂಡಿರುವ ಜನಸಂಖ್ಯೆಯನ್ನು ಮೇಲೆತ್ತಲು ಮಾಡುತ್ತಿರುವ ಯತ್ನ ಎಂದು ವಿಶ್ಲೇಷಿಸಿದ್ಧಾರೆ. 

LEAVE A REPLY

Please enter your comment!
Please enter your name here