ಮಂಗಳೂರು : ಭಾರತದ ತೇಜಸ್ ಯುದ್ಧ ವಿಮಾನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ತುಂಬಾನೇ ಹೆಚ್ಚುತ್ತಿದೆ. ಲೋಕಸಭೆಯಲ್ಲಿ ಶುಕ್ರವಾರ ಸರ್ಕಾರದ ಹೇಳಿಕೆಯ ಪ್ರಕಾರ, ಅಮೆರಿಕ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಈಜಿಪ್ಟ್ , ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್ ಆರು ದೇಶಗಳು ಲಘು ಯುದ್ಧ ವಿಮಾನಗಳನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದೆ. ಆದರೆ ಮಲೇಷ್ಯಾ ಈಗಾಗಲೇ ಭಾರತದ ಸ್ವದೇಶಿ ನಿರ್ಮಿತ 18 ಯುದ್ಧ ವಿಮಾನಗಳನ್ನು ಖರೀದಿಸಲು ಆರ್ಡರ್ ನೀಡಿದೆ.
ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ತಯಾರಿಸಿದ ತೇಜಸ್ ಸಿಂಗಲ್ ಎಂಜಿನ್ ಮಲ್ಟಿ ರೋಲ್ ಫೈಟರ್ ಏರ್‌ಕ್ರಾಫ್ಟ್ ಇದಾಗಿದ್ದು, ಇದು ಹೆಚ್ಚಿನ ಅಪಾಯದ ವಾಯು ವಾತಾವರಣದಲ್ಲಿಯು ಸಹ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.