ಬಂಟ್ವಾಳ : ಬೊಲ್ಪು ರೈತ ಉತ್ಪಾದಕರ ಕಂಪನಿ ಬಂಟ್ವಾಳ ಆಶ್ರಯದಲ್ಲಿ ಆ.17ರಂದು ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ಕೃಷಿ ಮಾಹಿತಿ ಶಿಬಿರ ನಡೆಯಿತು. ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ರೈತರ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಸ್ಯೆಗಳಿಗೆ ರೈತ ಉತ್ಪಾದಕರ ಕಂಪನಿ ಮೂಲಕ ಪರಿಹಾರ ಕಾಣುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಮಾಜಿ ಉಪ ಗವರ್ನರ್ ಕಿರಣ್ ಹೆಗ್ಡೆ ಮಾತನಾಡಿ ಕೃಷಿ ಮಾರುಕಟ್ಟೆ ಸಮಸ್ಯೆಯಿಂದ ಬಳಲುವ ರೈತರಿಗೆ ಕಂಪನಿ ಪರಿಹಾರದ ದಾರಿ ಆಗಬೇಕು.ರೈತರು ಕಂಪನಿಗೆ ಸದಸ್ಯರಾಗಿ ಬಲಿಷ್ಠ ಸಂಘಟನೆ ಆಗಲಿ ಎಂದು ಹಾರೈಸಿದರು.ಬೊಲ್ಪು ರೈ.ಉ. ಕಂಪನಿ ಅಧ್ಯಕ್ಷ ರಾಜಾ ಬಂಟ್ವಾಳ್ ಮಾತನಾಡಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಸರಕಾರದ ಸವಲತ್ತು ಪಡೆಯಲು ಸಹಕರಿಸಲು ಮನವಿ ಮಾಡಿದರು.
ಪ್ರಗತಿಪರ ಕೃಷಿಕ ಅಪ್ರಾಯ ಪೈ, ನೆಟ್ಲಮುಡ್ನ್ನೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಮಾತನಾಡಿದರು. ಪ್ರಪುಲ್ಲ ರೈ ಮಾಣಿ, ಪ್ರಹ್ಲಾದ ಶೆಟ್ಟಿ ಜಡ್ತಿಲ, ನಿರ್ದೇಶಕ ಜಗನ್ನಾಥ ಚೌಟ ಬದಿಗುಡ್ಡೆ ಸಲಹೆ ಸೂಚನೆ ನೀಡಿದರು. ಇಬ್ರಾಹಿಂ ಕೆ. ಮಾಣಿ ಕಾರ್ಯಕ್ರಮ ಸಂಘಟಿಸಿದರು. ಹರ್ಷಿತ್ ಕುಮಾರ್ ಸ್ವಾಗತಿಸಿ, ನಿರ್ದೇಶಕ ಕೃಷ್ಣಪ್ಪ ಸಪಲ್ಯ ಅಂತರ ವಂದಿಸಿದರು.