ಸಿದ್ದಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘ : ರೂ. 720 ಕೋಟಿ ವ್ಯವಹಾರ, ರೂ. 2.19 ಕೋಟಿ ಲಾಭ

0

ಸಿದ್ದಕಟ್ಟೆ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಎಫ್.ಎಫ್.124 ಇದರ 2025-26ನೇ ಸಾಲಿನಲ್ಲಿ ಒಟ್ಟು ರೂ.720.47 ಕೋಟಿ ವ್ಯವಹಾರ ನಡೆಸಿ ರೂ. 2,19,28,344.49 ಲಾಭ ಗಳಿಸಿದೆ ಎಂದು ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.

ಸೆ.16ರಂದು ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಂಘದ ವಿವರ:
1947ರಲ್ಲಿ ಬಿ. ಕೃಷ್ಣ ರೈ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ಸಂಘವು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಸೇರಿದಂತೆ ಬಂಟ್ವಾಳ ತಾಲೂಕಿನ 7 ಗ್ರಾಮಗಳೊಂದಿಗೆ ಒಟ್ಟು 8 ಗ್ರಾಮಗಳ ವ್ಯಾಪ್ತಿ ಹೊಂದಿದ್ದು 79 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

2025-26ರಲ್ಲಿ ವಿವಿಧ ಉದ್ದೇಶಗಳಿಗೆ ರೂ.133.63 ಕೋಟಿ ಸಾಲ ವಿತರಿಸಲಾಗಿದ್ದು, ಶೇ.98ರಷ್ಟು ವಸೂಲಾತಿಯಾಗಿದೆ. ವರ್ಷಾಂತ್ಯಕ್ಕೆ ರೂ.69.56 ಕೋಟಿ ಠೇವಣಿ ಹೊಂದಿದೆ. ಆಡಿಟ್‌ನಲ್ಲಿ ನಿರಂತರವಾಗಿ ‘ಎ’ ಗ್ರೇಡ್ ಕಾಯ್ದುಕೊಂಡಿದೆ.

ಹವಾಮಾನ ಬೆಳೆವಿಮೆಯಲ್ಲಿ ಜಿಲ್ಲೆಯಲ್ಲೇ ಮುಂಚೂಣಿ: 1885 ರೈತರ 2395.78 ಎಕರೆಗೆ ರೂ.62.62 ಲಕ್ಷ ಪ್ರೀಮಿಯಂ ಪಾವತಿಸಲಾಗಿದೆ. ಕಳೆದ ವರ್ಷ ಸದಸ್ಯರು 5-6 ಕೋಟಿ ಪರಿಹಾರ ಪಡೆದಿದ್ದು, ಜಿಲ್ಲೆಯಲ್ಲಿ ಮುಂಚೂಣಿ ಸಾಧನೆ.

ಇತರೆ ಕಾರ್ಯಕ್ರಮಗಳು:

  • ಸದಸ್ಯರ ಪ್ರತಿಭಾವಂತ SSLC, PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವ.
  • ರೈತ ಕಲ್ಯಾಣ ನಿಧಿ ಯೋಜನೆಯಡಿ ಮೃತ 38 ಸದಸ್ಯರ ಕುಟುಂಬಕ್ಕೆ ತಲಾ ರೂ.10,000 ನೆರವು.
  • ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಣೆ, ನೇತಾಜಿ ಬಹುಪಯೋಗಿ ಸೇವಾಕೇಂದ್ರದ ಮೂಲಕ ರಸಗೊಬ್ಬರ, ಸಾವಯವ ಗೊಬ್ಬರ, ಮೈಲ್ತುತ್ತು, ಸುಣ್ಣ, ಕೃಷಿ ಉಪಕರಣಗಳ ಮಾರಾಟ, ರಿಯಾಯಿತಿ ದರದಲ್ಲಿ ವಿತರಣೆ.
  • ಪಂಚ ಪರಿವರ್ತನೆ ಕಲ್ಪನೆಯಡಿ ಪರಿಸರ ಸಂರಕ್ಷಣೆಗಾಗಿ ಪ್ರತಿ ಸದಸ್ಯರಿಗೆ ಹಲಸಿನ ಗಿಡ ವಿತರಣೆ – “ಕಾಡು ಬೆಳೆಸಿ-ನಾಡು ಉಳಿಸಿ” ಅಭಿಯಾನ.

ಸಾಮಾಜಿಕ ಕಾರ್ಯ:
ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತ 27 ಯೋಧರಿಗೆ ಶ್ರದ್ಧಾಂಜಲಿ ನಿರ್ಣಯ, ಬೆಳೆ ಸಮೀಕ್ಷೆ ನಡೆಸಿದ ಕೃಷಿ ಇಲಾಖೆಯ ಖಾಸಗಿ ನಿವಾಸಿಗಳಿಗೆ ಗೌರವ, ಮಗಳ ಅಂಗಾಂಗ ದಾನ ಮಾಡಿದ ಮಮತಾ ಶೆಟ್ಟಿ ಅವರಿಗೆ ಗೌರವಾರ್ಪಣೆ, PUC ರ‍್ಯಾಂಕ್ ವಿಜೇತರಿಗೆ ಅಭಿನಂದನೆ.

ಶಾಖೆಗಳು:
ಪ್ರಧಾನ ಕಚೇರಿ ಸಿದ್ದಕಟ್ಟೆ ಸೇರಿದಂತೆ ಆರಂಬೋಡಿ, ರಾಯಿ, ಮಾವಿನಕಟ್ಟೆ, ಅರಳದಲ್ಲಿ 4 ಶಾಖೆಗಳು. ಸಿಸಿ ಕ್ಯಾಮೆರಾ, ಸೈರನ್, RTGS, NEFT, QR ಕೋಡ್ ವ್ಯವಸ್ಥೆ ಇದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ರೈತ ಸಭಾಂಗಣ ಉಚಿತವಾಗಿ ನೀಡಲಾಗುತ್ತಿದೆ.

ಸಂಘದ 2025-26ನೇ ಸಾಲಿನ ಮಹಾಸಭೆ ಸೆ.19ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಪ್ರಭಾಕರ ಪ್ರಭು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ನಿರ್ದೇಶಕರುಗಳಾದ ಸತೀಶ್ ಪೂಜಾರಿ, ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಜಾರಪ್ಪ ನಾಯ್ಕ, ವೀರಪ್ಪ ಪರವ, ವಿಶ್ವನಾಥ ಶೆಟ್ಟಿಗಾರ್, ಎ.ಶಿವ ಗೌಡ, ಮಂದಾರತಿ ಎಸ್.ಶೆಟ್ಟಿ, ಪುಷ್ಪಲತಾ ಎಸ್.ಆರ್., ಕೀರ್ತಿರಾಜ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೆ, ನವೀನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ, ಸಹಾಯಕ ಮಲ್ಲಿಕಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here