ಮಾ.20: ವಸಾಹತು ಮನೋಭಾವದಿಂದ ಭಾರತೀಯೆಡೆಗೆ-ಒಂದು ಚಿಂತನೆ ರಾಷ್ಟ್ರೀಯ ವಿಚಾರ ಸಂಕಿರಣ

0

ಬಂಟ್ವಾಳ: ಇಲ್ಲಿನ ಕಲ್ಲಡ್ಕದಲ್ಲಿರುವ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ ವಸಾಹತು ಮನೋಭಾವದಿಂದ ಭಾರತೀಯೆಡೆಗೆ-ಒಂದು ಚಿಂತನೆ ಎನ್ನುವ ರಾಷ್ಟ್ರೀಯ ವಿಚಾರ ಸಂಕಿರಣ ಮಾರ್ಚ್ 20ರಂದು ಶುಕ್ರವಾರ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ ಅಂದು ಬೆಳಿಗ್ಗೆ ಟಿವಿ9 ಕನ್ನಡದ ಸಂಪಾದಕ ರಂಗನಾಥ ಭಾರದ್ವಾಜ್ ಕಾರ್ಯಕ್ರಮ ಉದ್ಘಾಟಿಸುವರು, ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸುವರು ಎಂದರು. ಬಳಿಕ ನಡೆಯುವ ಗೋಷ್ಟಿಯಲ್ಲಿ ಬೆಂಗಳೂರಿನ ವಿಭು ಅಕಾಡೆಮಿಯ ಸ್ಥಾಪಕಿ, ಪ್ರಾಧ್ಯಪಕಿ ಡಾ. ಆರತಿ ವಿ.ಬಿ. ಭಾಷೆ, ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೊಂದು ಇಣುಕು ನೋಟ ಎನ್ನುವ ಬಗ್ಗೆ ಗೋಷ್ಟಿಯಲ್ಲಿ ವಿಚಾರ ಮಂಡಿಸುವರು, ಆಡಳಿತ ಮತ್ತು ನ್ಯಾಯಾಂಗದ ವ್ಯವಸ್ಥೆ ವಸಾಹತು ಭಾವದಿಂದ ಮುಕ್ತವಾಗುವತ್ತ ವಿಷಯದ ಬಗ್ಗೆ ಕುಡಚಿ ಮಾಜಿ ಶಾಸಕ ಪಿ. ರಾಜೀವ ಕುಡಚಿ ವಿಚಾರ ಮಂಡಿಸುವರು. ಶಿಕ್ಷಣ, ಇತಿಹಾಸದ ಮೇಲೊಂದು ಚರ್ಚೆಯ ಬಗ್ಗೆ ಪಠಪುಸ್ತಕ ಪರಿಷ್ಕರಣ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಮುಕ್ತ ಚಿಂತನ ಹಾಗೂ ಸಮಾರೋಪದಲ್ಲಿ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್ ವಿಚಾರ ಮಂಡಿಸುವರು ಎಂದು ತಿಳಿಸಿದರು.


ವಸಾಹತುಶಾಹಿ ಕಾಲದಲ್ಲಿ ವಿದೇಶಿ ಆಳ್ವಿಕೆಯಿಂದ ಕೇವಲ ದೇಶದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಷ್ಟೇ ಅಲ್ಲ, ಜನರ ಮನೋಭಾವ, ಚಿಂತನೆ ಮತ್ತು ಸಂಸ್ಕೃತಿಯ ಮೇಲೂ ಪ್ರಭಾವ ಬೀರಿತು. ಅನೇಕರು ಪಾಶ್ಚಾತ್ಯ ಸಂಸ್ಕೃತಿ ಮತ್ತು ಚಿಂತನೆಗಳನ್ನು ಶ್ರೇಷ್ಠವೆಂದು ಭಾವಿಸಿ, ತಮ್ಮದೇ ಭಾರತೀಯ ಜ್ಞಾನಪರಂಪರೆ, ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಮರೆಯುವ ಪರಿಸ್ಥಿತಿ ಉಂಟಾಯಿತು. ಆದರೆ ನಿಜವಾದ ಪ್ರಗತಿ ಎಂದರೆ ಪಾಶ್ಚಾತ್ಯವನ್ನು ಅಂಧವಾಗಿ ಅನುಕರಿಸುವುದಲ್ಲ; ಭಾರತೀಯತೆಯ ಮೌಲ್ಯಗಳು, ಪರಂಪರೆ, ಜ್ಞಾನ ಮತ್ತು ಆತ್ಮಗೌರವವನ್ನು ಪುನಃ ಅರಿತುಕೊಳ್ಳುವುದಾಗಿದೆ. ಆದ್ದರಿಂದ ವಸಾಹತುಶಾಹಿ ಮನೋಭಾವದಿಂದ ಹೊರಬಂದು, ಸ್ವದೇಶಿ ಚಿಂತನೆ, ಸಂಸ್ಕೃತಿ ಮತ್ತು ಆತ್ಮಸಮ್ಮಾನವನ್ನು ಬೆಳೆಸುವ ಮೂಲಕ ಭಾರತೀಯತೆಯತ್ತ ಮರಳುವುದು ಅಗತ್ಯವಾಗಿದೆ. ಈ ವಿಚಾರದ ಕುರಿತು ಚಿಂತನೆ ನಡೆಸುವ ಸಲುವಾಗಿ ಈ ಬಾರಿ ವಸಾಹತುಶಾಹಿ ಮನೋಭಾವದಿಂದ ಭಾರತೀಯತೆಯೆಡೆಗೆ- ಒಂದು ಚಿಂತನೆ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.


ಸುದ್ದಿಗೋಷ್ಟಿಯಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಪ್ರಾಂಶುಪಾಲ ಕೃಷದ್ಣ ಪ್ರಸಾದ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here