ಬಂಟ್ವಾಳ: ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣ ನಡೆಸಿದ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಮಜೀದ್ ಎಸ್ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆಯಲು ಅದೆಷ್ಟೋ ಹಿರಿಯರು, ಯುವಕರು, ಮಹಿಳೆಯರು ಹುತಾತ್ಮ ರಾಗಿದ್ದಾರೆ. ಅವರನ್ನೆಲ್ಲರನ್ನು ಈ ದಿನ ಸ್ಮರಿಸುತ್ತಾ ಮುಂದಿನ ಪೀಳಿಗೆಗಳಾದ ನಾವು ಸುಭದ್ರ, ಸುಸಂಸ್ಕೃತ , ಸ್ವಚ್ಛ ಭಾರತವನ್ನು ನಿರ್ಮಿಸಲು ಪ್ರಯತ್ನಪಡೋಣ ಎಂದರು. ವಿದ್ಯಾರ್ಥಿನಿಯರಾದ ಮರಿಯಮ್ ನಾಶಿತಾ, ದುಲೈಕ ಶಾನ್ ವಾಝ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರದ ಬಗ್ಗೆ ಮಾತನಾಡಿದರು. ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಉಪ ಪ್ರಾಂಶುಪಾಲರಾದ ಅಂಜಲಿನ ಸುನೀತ ಪಿರೇರ ಮತ್ತು ಎಲ್ಲಾ ಉಪನ್ಯಾಸಕರು,ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಖತೀಜತುಲ್ ನಝೀಲಾ ಕಾರ್ಯಕ್ರಮ ನಿರ್ವಹಿಸಿ, ಹಲೀಮತ್ ತಫ್ ಹೀಮಾ ಧನ್ಯವಾದವಿತ್ತರು.








