ಬಂಟ್ವಾಳ: ಆದರ್ಶ ಆಂಗ್ಲ ಮಾಧ್ಯಮ ಶಾಲೆ, ಸಜೀಪ ನಡು ಇದರ ಆಶ್ರಯದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ಶಾಲಾ ಟ್ರಸ್ಟಿ ಇಬ್ರಾಹಿಂ ನೌರೀಶ್ ನೆರವೇರಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡಿದರು.

ವೇದಿಕೆಯಲ್ಲಿ ಸಜೀಪ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಎಸ್ ಅಬೂಬಕ್ಕರ್ ಸಜೀಪ, ಲತೀಫ್ ಬೋಳಮೆ ಉದ್ಯಮಿ ನಾಸಿರ್ ಬೋಳಮೆ ಶಾಲಾ ಸಂಚಾಲಕರಾದ ಮೊಹಮ್ಮದ್ ನಜೀಬ್ , ಶಾಲಾ ಮುಖ್ಯ ಶಿಕ್ಷಕಿ ವಸಂತಿ ಜಗದೀಶ್ , ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಸೀಮ್ , ಉದ್ಯಮಿ ಮೊಹಮ್ಮದ್ ಹನೀಫ್, ಸಾಮಾಜಿಕ ಕಾರ್ಯಕರ್ತರಾದ ಹನೀಫ್ ಗೋಳಿಪಡ್ಫು, ಜುನೈದ್ ಅಮೀರ್ ಅಲ್ತಾಫ್, ಗಣೇಶ್ , ಶಾಲಾ ನಾಯಕ ಮೊಹಮ್ಮದ್ ಶಾಹಿಲ್ ಹಾಗೂ PTA ಸದಸ್ಯರು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಫಾತಿಮಾ ರಿಝಾ ಸ್ವಾಗತಿಸಿದರು. ಮೊಹಮ್ಮದ್ ಫರ್ಷದ್ ಕಾರ್ಯಕ್ರಮ ನಿರೂಪಿಸಿದರು. ಗೌರವ್ ಎಲ್ ಧನ್ಯವಾದಗೈದರು.








