ಬಂಟ್ವಾಳ: ಭಾರೀ ಮಳೆ : ಹಲವು ಮನೆಗಳಿಗೆ ಹಾನಿ

0

ಬಂಟ್ವಾಳ: ಗಾಳಿ ಮಳೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಮ್ಮುಂಜೆ ಗ್ರಾಮದ ನೆಫಿಸಾ ಅವರ ಮನೆಗೆ ಭಾಗಶಃ ಹಾನಿಯಾಗಿದೆ.


ಮುಡೈಕೋಡಿಕುಳ ಗ್ರಾಮದ ಮೋಂಟೆಮಾರು ನಿವಾಸಿ ಗಿರಿಜ ಗೌಡ ಅವರ ವಾಸ್ತವ್ಯದ ಮನೆಗೆ ಹೊಂದಿಕೊಂಡಿದ್ದ ಶೀಟ್ ಅಳವಡಿಸಿದ ಉಪಕಟ್ಟಡ ಗಾಳಿ-ಮಳೆಯಿಂದ ಹಾನಿಗೊಳಗಾಗಿದೆ.
ಕನ್ಯಾನ ಗ್ರಾಮದ ಪನೆಯಡ್ಕ ನಿವಾಸಿ ಹರಿಣಾಕ್ಷಿ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.


ಪುದು ಗ್ರಾಮದ ಅಮ್ಮೇಮಾರ್ ಎಂಬಲ್ಲಿ ಇಕ್ಬಾಲ್ ಹಸಿರ್ ಅವರ ಮನೆ ಮಳೆಯಿಂದ ಭಾಗಶಃ ಹಾನಿಗೊಳಗಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಕೋಡಿ ಎಂಬಲ್ಲಿ ಸಾವಿತ್ರಿ ಅವರ ಮನೆಯ ಹಿಂಭಾಗದ ಬರೆ ಜರಿದು ಮಣ್ಣು ಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿದೆ. ಕರೋಪಾಡಿ ಗ್ರಾಮದ ಕುರೋವುಮೂಲೆ‌ ನಿವಾಸಿ ರಾಮ ನಾಯ್ಕ ಎಂಬವರ ವಾಸ್ತವ್ಯದ ಮನೆಗೆ ಕರೆಂಟ್ ಕಂಬ ಮುರಿದು ಬಿದ್ದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ.

LEAVE A REPLY

Please enter your comment!
Please enter your name here