ಕಾವಳಪಡೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ 12ನೇ ವಿಶ್ವ ಯೋಗ ದಿನಾಚರಣೆ

0

ವಗ್ಗ: ಸರಕಾರಿ ಪದವಿಪೂರ್ವ ಕಾಲೇಜು ಕಾವಳಪಡೂರು ಇಲ್ಲಿ 12ನೇ ವಿಶ್ವ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಶಿಕ್ಷಕ ಶೇಖ್ ಅದಂ ಸಾಹೇಬ್ ನೆಲ್ಯಾಡಿ ಮಾರ್ಗದರ್ಶನದಲ್ಲಿ ಹಾಗೂ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ. ಜಿನರಾಜ್ ಆರಿಗ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.ಶಾಲಾ ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಇಲಾಖಾ ನಿರ್ದೇಶನದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು. “ಆರೋಗ್ಯಕರ ಜೀವನಕ್ಕಾಗಿ ಯೋಗ” ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲರೂ ಉತ್ಸಾಹದಿಂದ ಯೋಗಾಸನ ಮಾಡಿದರು.“ಯೋಗ ಮತ್ತು ಜೀವನ” ವಿಚಾರದ ಕುರಿತು ಕನ್ನಡ ಅಧ್ಯಾಪಕಿ ಲೈಲಾ ಪರ್ವಿನ್ ವಿದ್ಯಾರ್ಥಿಗಳಿಗೆ ಪ್ರವಚನ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ ಕೆ. ಜಾಲ್ಸೂರು ಕಾರ್ಯಕ್ರಮ ಸಂಯೋಜಿಸಿದರು.ವೇದಿಕೆಯಲ್ಲಿ ಶಿಕ್ಷಕರಾದ ರಮಾಕುಮಾರಿ, ಹೆಲೆನಾ, ಅಮೃತವಲ್ಲಿ, ಬೇಬಿ ಹಾಗೂ ಶಾಲಾ ನಾಯಕಿ ಶೈಮಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರು ಸ್ವಾಗತಿಸಿದರು. ಕ್ರೀಡಾ ಸಂಘದ ಅಧ್ಯಕ್ಷೆ ರಿಷಿಕಾ ವಂದಿಸಿದರು.

LEAVE A REPLY

Please enter your comment!
Please enter your name here