ವಗ್ಗ: ದ.ಕ.ಜಿ.ಪ. ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕಾವಳಪಡೂರು ಇಲ್ಲಿ 2026-27ನೇ ಸಾಲಿನ ಶಾಲಾ ಸಂಸತ್ತು ರಚಿಸಲಾಯಿತು.ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸುವ ಉದ್ದೇಶದಿಂದ ಮತದಾನದ ಮೂಲಕ ಶಾಲಾ ನಾಯಕ, ನಾಯಕಿ ಹಾಗೂ ಮಂತ್ರಿಮಂಡಲವನ್ನು ಆಯ್ಕೆ ಮಾಡಲಾಯಿತು.
ಮತದಾನದ ವೇಳೆ ಮುಖ್ಯೋಪಾಧ್ಯಾಯ ಶೇಕ್ ಆದಂ ಸಾಹೇಬ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಮತದಾನದ ಕ್ರಮ ಮತ್ತು ಮಹತ್ವವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಬಳಸಿ ಮತ ಚಲಾಯಿಸಿದರು.ಮಾರ್ಗದರ್ಶಕ ಶಿಕ್ಷಕಿ ಹೆಲೆನ್ ಜುಲ್ಯಾನ್ ಸಿಕ್ವೇರಾ ವಂದಿಸಿದರು.








