ಅನಂತಾಡಿ-ನೆಟ್ಲ ಮುಡ್ನೂರು ಸಂಪರ್ಕ ರಸ್ತೆ ಕಾಂಕ್ರೀಟೀಕರಣಕ್ಕೆ 40 ಲಕ್ಷ ಅನುದಾನ : ಶಾಸಕರಿಂದ ಭೂಮಿಪೂಜೆ

0

ಬಂಟ್ವಾಳ: ಅನಂತಾಡಿ ಮತ್ತು ನೆಟ್ಲ ಮುಡ್ನೂರು ಗ್ರಾಮವನ್ನು ಸಂಪರ್ಕಿಸುವ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿಸುವ ಕಾಮಗಾರಿಗೆ ಶಾಸಕರ ವಿಶೇಷ ಅನುಧಾನದಲ್ಲಿ 40 ಲಕ್ಷ ರೂ. ಬಿಡುಗಡೆಯಾಗಿದ್ದು, ಜೂ.9ರಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, “ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅತ್ಯಂತ ಪುರಾತನ ಮತ್ತು ಪ್ರಸಿದ್ಧಿಯಾಗಿದೆ. ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗಲೆಂದು ಮತ್ತು ಎರಡೂ ಗ್ರಾಮದ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ 40 ಲಕ್ಷ ವೆಚ್ಚದಲ್ಲಿ ಈ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲಾಗುತ್ತದೆ” ಎಂದರು.

“ಗುತ್ತಿಗೆದಾರರು ಉತ್ತಮವಾಗಿ, ಗುಣಮಟ್ಟದ ಕೆಲಸ ಮಾಡುತ್ತಾರೆ ಎಂಬ ಭರವಸೆ ಇದೆ. ಕಾಮಗಾರಿ ವೇಳೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಜನರಿಗೆ ತೊಂದರೆಯಾಗದಂತೆ ಹೊಂದಾಣಿಕೆಯಿಂದ ಕಾಮಗಾರಿ ನಡೆಸಿ” ಎಂದು ಶಾಸಕರು ಸೂಚಿಸಿದರು. “ಬಂಟ್ವಾಳ ಕ್ಷೇತ್ರಕ್ಕೆ ಬರುವ ಎಲ್ಲಾ ಅನುದಾನವನ್ನು ಬಳಸಿ, ಆದ್ಯತೆ ಮೇರೆಗೆ ಜನರ ಬೇಡಿಕೆ ಈಡೇರಿಸಲಾಗುವುದು” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಉಪಾಧ್ಯಕ್ಷ ತನಿಯಪ್ಪ ಗೌಡ, ಕ್ಷೇತ್ರ ಕಾರ್ಯದರ್ಶಿ ಸನತ್ ಕುಮಾರ್ ರೈ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ ರೈ, ಕಾರ್ಯದರ್ಶಿ ನಾಗೇಶ್ ಭಂಡಾರಿ, ಗ್ರಾ.ಪಂ ಅಧ್ಯಕ್ಷೆ ಸುಜಾತ ಸುರೇಶ್, ಉಪಾಧ್ಯಕ್ಷೆ ಸಂಧ್ಯಾ ವಿಶ್ವನಾಥ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನರೇಂದ್ರ ರೈ ನೆಲ್ತೊಟ್ಟು, ಪ್ರಮುಖರಾದ ಮಹಾಬಲ ಪೂಜಾರಿ, ನವೀನ ಆಚಾರ್ಯ, ಶಿವರಾಮ್ ಶೆಟ್ಟಿ, ಗೀತಾ ಚಂದ್ರಶೇಖರ್, ಜ್ಯೋತಿ ಹೆಗ್ಡೆ, ಸ್ಥಳದಾನಿಗಳಾದ ರಾಧಾಕೃಷ್ಣ ಭಾಗವತ್, ಕೆ.ಟಿ.ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here