ಅಮ್ಟಾಡಿ: ಬೇಸಿಗೆ ರಜೆ ಮುಗಿಸಿ ವಿದ್ಯಾನಿಕೇತನ ಶಾಲೆ ಪುನರಾರಂಭ : ವಿದ್ಯಾರ್ಥಿಗಳಿಗೆ ಸ್ವಾಗತ

0

ಬಂಟ್ವಾಳ: ಅಣ್ಣಪ್ಪ ಬಾಳಿಗಾ ಎಜುಕೇಶನ್ ಟ್ರಸ್ಟ್ ಆಡಳಿತದಲ್ಲಿರುವ ಅಮ್ಟಾಡಿ ಗ್ರಾಮದ ವಿದ್ಯಾನಿಕೇತನ ವಿದ್ಯಾಸಂಸ್ಥೆ ಶಾಲೆಯು ಬೇಸಿಗೆ ರಜೆಯ ಬಳಿಕ ಜೂನ್ 4, ಗುರುವಾರ ಪುನರಾರಂಭಗೊಂಡಿತು.

ಶಾಲೆಯ ಮೊದಲ ದಿನ ವಿದ್ಯಾರ್ಥಿಗಳು ಉತ್ಸಾಹದಿಂದ ಆಗಮಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದವು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿತು. ವಿದ್ಯಾರ್ಥಿಗಳಿಗೆ ಹೂವು ಹಾಗೂ ಸಿಹಿ ಹಂಚಿ ಹೊಸ ಶೈಕ್ಷಣಿಕ ವರ್ಷದ ಶುಭಾರಂಭ ಮಾಡಲಾಯಿತು. ರಜೆ ಬಳಿಕ ಸಹಪಾಠಿಗಳನ್ನು ಭೇಟಿಯಾದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಶಾಲೆಯಲ್ಲಿ ಪಾಠ-ಪ್ರವಚನ ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿದ್ದು, ಶಾಲಾ ಆವರಣದಲ್ಲಿ ಹರ್ಷದ ವಾತಾವರಣ ಕಂಡುಬಂದಿತು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ. ಸುರೇಶ ಬಾಳಿಗಾ ಶುಭ ಹಾರೈಸಿ, “ಹೊಸ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಯಲ್ಲಿ ಶ್ರದ್ಧೆ, ಪರಿಶ್ರಮದಿಂದ ಮುನ್ನಡೆಯಲಿ. ಶಿಕ್ಷಕರು ಅಮೂಲ್ಯ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲಿ. ಸಿಬ್ಬಂದಿ ನಿಷ್ಠೆ, ಸೇವಾಭಾವದಿಂದ ಸಂಸ್ಥೆಯ ಪ್ರಗತಿಗೆ ಕೈಜೋಡಿಸಲಿ. ಈ ವರ್ಷ ಎಲ್ಲರಿಗೂ ಯಶಸ್ಸು, ಸಂತೋಷ, ಉತ್ತಮ ಆರೋಗ್ಯ ತರಲಿ” ಎಂದರು.

ಈ ಸಂದರ್ಭದಲ್ಲಿ ಟ್ರಸ್ಟಿ ಕಿರಣ್ ಎಸ್. ಬಾಳಿಗಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ, ಮೊಂಟೆಸ್ಸರಿ ವಿಭಾಗದ ಮುಖ್ಯೋಪಾಧ್ಯಾಯಿನಿ ಸವಿತಾ, ಸಿಬ್ಬಂದಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here