ಬಂಟ್ವಾಳ: 2026-27ನೇ ಸಾಲಿಗೆ ಅನ್ವಯವಾಗುವಂತೆ ರಾಜ್ಯದಲ್ಲಿ 1 ನೇ ತರಗತಿ ದಾಖಲಾತಿಗೆ ಇದ್ದ 6 ವರ್ಷದ ಮಿತಿಯನ್ನು ಸಡಿಲಿಸಿ ರಾಜ್ಯ ಸರಕಾರ ಘೋಷಣೆ ಮಾಡಿದೆ.
ಗುರುವಾರ ಸದನದ ಕಲಾಪದಲ್ಲಿ ಈ ಕುರಿತು ಮಹತ್ವದ ಘೋಷಣೆ ಮಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ 1 ನೇ ತರಗತಿ ದಾಖಲಾತಿಗೆ ಈಗ ಇದ್ದ 6 ವರ್ಷದ ಮಿತಿಯನ್ನು 2 ತಿಂಗಳ ಕಾಲಸಡಿಲಿಕೆ ಮಾಡಲಾಗುವುದು (5 ವರ್ಷ10 ತಿಂಗಳು ಆಗಿರಬೇಕು) ಎಂದು ಘೋಷಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿಗೂ ಹೊಸದಾಗಿ ಕಾನೂನು ತಂದು ಶಾಶ್ವತ ಪರಿಹಾರ ನೀಡುವ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಇಲಾಖೆ ವತಿಯಿಂದ ಕಾನೂನು ತರುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ 3 ಸೆಕ್ಷನ್ 20 ರ ಮಕ್ಕಳನ್ನು 1ನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿ ನೀಡಲಾಗುತ್ತಿದೆ. ದಾಖಲಾತಿ ತಂತ್ರಾಂಶದಲ್ಲಿಯೂ ಬದಲಾವಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.








