ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಯುವಕರ ಸಂಘ ಹಾಗೂ ಮಹಿಳಾ ಸಂಘ ದೇವಂದಬೆಟ್ಟು, ಇದರ 42ನೇ ವರ್ಷದ ವಾರ್ಷಿಕೋತ್ಸವವು ಏ.18ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆಯು ದೇವಂದಬೆಟ್ಟು ಶ್ರೀಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರದಾನ ಅರ್ಚಕರಾದ ಕೆ ಶಿವರಾಮ ಶಿವರಾಯ, ಯುವಕರ ಸಂಘದ ಅಧ್ಯಕ್ಷರಾದ ಶಶಿಧರ್ ಕನಪಾಡಿ, ಕೋಶಾಧಿಕಾರಿ ಪ್ರಶಾಂತ್ ಕನಪಾಡಿ, ಪ್ರಮುಖರಾದ ಮನೋಜ್ ಕನಪಾಡಿ, ಜಗದೀಶ್ ಬಂಗೇರ ಕಂಜತ್ತೂರು, ದೇವಂದಬೆಟ್ಟು, ಉದಯ ದೇವಂದಬೆಟ್ಟು, ಚಂದ್ರಹಾಸ ಕರ್ಕೇರ ದೇವಂದಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.








