ಬಂಟ್ವಾಳ: ಭಾರತೀಯ ಸಂಸ್ಕೃತಿಯಲ್ಲಿ “ವಿವಾಹ” ಎಂಬುವುದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಂದವಲ್ಲ. ಬದಲಾಗಿ ಅದು ಎರಡು ಕುಟುಂಬಗಳ ಮಿಲನ ಮತ್ತು ಪವಿತ್ರವಾದ ವಿವಾಹ ಬಂಧ.
ಇಂದಿನ ಆಧುನಿಕ ಯುಗದಲ್ಲಿ ಸೂಕ್ತ ಜೀವನ ಸಂಗಾತಿಯನ್ನು ಹುಡುಕುವುದು ಒಂದು ಸವಾಲಿನ ಕೆಲಸವಾಗಿರುವಾಗ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಸೋನು ಸ್ಟುಡಿಯೋದಲ್ಲಿ ಕಚೇರಿಯನ್ನು ಹೊಂದಿರುವ “ಹಿಂದೂ ವಿವಾಹ ವೇದಿಕೆ” ಸಂಬಂಧಗಳನ್ನು ಬೆಸೆಯುವ ಆಶಾಕಿರಣವಾಗಿ ಮೂಡಿ ಬಂದಿದೆ. ನಂಬಿಕೆ ಮತ್ತು ಯಶಸ್ಸಿನ ಪಯಣ ಯಾವುದೇ ಒಂದು ಕಾರ್ಯಕ್ಕೆ ಅಡಿಪಾಯ, ನಂಬಿಕೆ. ಹಿಂದೂ ವಿವಾಹ ವೇದಿಕೆಯೂ ಅತ್ಯಂತ ಅಲ್ಪ ಅವಧಿಯಲ್ಲಿ ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕೇವಲ ಮಾತಿನ ಮೂಲಕವಲ್ಲದೇ ಕಾರ್ಯ ರೂಪದಲ್ಲಿ ತನ್ನ ದಕ್ಷತೆಯನ್ನು ಸಾಬೀತು ಪಡಿಸಿದೆ. ವೇದಿಕೆಯೂ ಈಗಾಗಲೇ 15ಕ್ಕೂ ಹೆಚ್ಚು ಸಂಬಂಧಗಳನ್ನು ಯಶಸ್ವಿಯಾಗಿ ಕುದುರಿಸಿ, ಸೈ ಎನಿಸಿಕೊಂಡಿದೆ. ವಧು ವರರ ವಿವರಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಗೌಪ್ಯವಾಗಿ ನಿರ್ವಹಿಸುವುದು ಈ ಸಂಸ್ಥೆಯ ಪ್ರಮುಖ ಗುಣ. ಆಧುನಿಕ ತಂತ್ರಜ್ಞಾನವನ್ನು ಸ್ವಲ್ಪ ಮಟ್ಟಿಗೆ ಬಳಸಿಕೊಂಡರೂ ನಮ್ಮ ಸಂಪ್ರದಾಯ ಮತ್ತು ಸಂಸ್ಕಾರಗಳಿಗೆ ಚ್ಯುತಿ ಬರದಂತೆ ಸಂಬಂಧಗಳನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದೆ.
ಸಂಬಂಧಗಳನ್ನು ಹುಡುಕಲು ಅನೇಕ ದಾರಿಗಳಿದ್ದರೂ ವೇದಿಕೆಯೂ ತನ್ನದೇ ಆದ ಸಾಂಪ್ರಾದಾಯಿಕ ಶೈಲಿಯಿಂದ ಗುರುತಿಸಿಕೊಳ್ಳುತ್ತಿದೆ. ಪ್ರತಿಯೊಂದು ಫ್ರೋಫೈಲ್ ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವರ ಅಭಿರುಚಿಗೆ ತಕ್ಕಂತೆ ವಧು ವರರನ್ನು ಸೂಚಿಸಲಾಗುತ್ತದೆ. ವಿಲಂಬವಿಲ್ಲದೆ ಮಾಹಿತಿ ವಿನಿಮಯ ಮಾಡುವುದರಿಂದ ಸಂಬಂಧಗಳು ಬೇಗನೆ ಕೈಗೂಡಲು ಸಹಕಾರಿಯಾಗಗುತ್ತದೆ. ಇಲ್ಲಿ ನೋಂದಣಿಯಾಗುವ ಪ್ರತಿಯೊಂದು ವಿವರವೂ ಅಧಿಕೃತವಾಗಿದ್ದು, ಪೋಷಕರಿಗೆ /ಹೆತ್ತವರಿಗೆ ವೇದಿಕೆ ಬರವಸೆಯ ತಾಣವಾಗಿದೆ. ಜೀವನ ಪೂರ್ತಿ ಜೊತೆಗಿರಬೇಕಾಗಿರುವ ಸಂಗಾತಿಯನ್ನು ಆಯ್ಕೆ ಮಾಡುವಾಗ ನಂಬಿಕೆಗೆ ಇಲ್ಲಿ ಮೊದಲ ಆಧ್ಯತೆ. ಮುಂದಿನ ದಿನಗಳಲ್ಲಿ ನೂರಾರು ಕುಟುಂಬಗಳ ವಿವಾಹಾಪೇಕ್ಷಿತರ ಕನಸ್ಸನ್ನು ನನಸು ಮಾಡುವ ಗುರಿಯೊಂದಿಗೆ ವೇದಿಕೆ ಹೆಜ್ಜೆ ಹಾಕುತ್ತಿದೆ. ನೀವೂ ಕುಟುಂಬದಲ್ಲಿ, ಸಮಾಜದಲ್ಲಿ ಸೂಕ್ತ ಸಂಗಾತಿಯ ಹುಡುಕಾಟಕ್ಕಾಗಿ ಈ ವೇದಿಕೆಯನ್ನು (9035640248) ಸಂಪರ್ಕಿಸಬಹುದು. ಬಳ್ಳೆಯ ಸಂಬಂಧಗಳು ಆಕಸ್ಮಿಕವಾಗಿ ರಸ್ತೆಯಲ್ಲಿ ಸಿಗುವಂತದ್ದಲ್ಲ. ಅವುಗಳನ್ನು ಸರಿಯಾದ ವೇದಿಕೆಯ ಮೂಲಕ ಕಂಡುಕೊಳ್ಳಬೇಕಿದೆ.
“ಅಂದ ಹಾಗೆ, ಹಿಂದೂ ವಿವಾಹ ವೇದಿಕೆ ಒಂದು ನೋಂದಾಯಿತ ಸಂಸ್ಥೆ, ನೆನಪಿರಲಿ.”








