ಶ್ರೀ ನಾಲ್ಕೈತ್ತಾಯ ದೈವ ಮಸೀದಿ ಭೇಟಿ : ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ದೃಶ್ಯ

0

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಂಜದಗೋಳಿಯಲ್ಲಿ ನಡೆಯುವ ನೇಮೋತ್ಸವ ಭಂಡಾರ ಬರುವ ವೇಳೆ ಶ್ರೀ ನಾಲ್ಕೈತ್ತಾಯ ದೈವ ನಂದಾವರ ಮಸೀದಿಗೆ ಭೇಟಿ ನೀಡುವ ಅಪರೂಪದ ದೃಶ್ಯಕ್ಕೆ ಮಾ.17ರಂದು ರಾತ್ರಿ ಹಿಂದೂ-ಮುಸ್ಲಿಂ ಬಂಧುಗಳು ಸಾಕ್ಷಿಯಾದರು.


ಸಜೀಪಮುನ್ನೂರು ಗ್ರಾಮದ‌ ನಂದಾವರ ಬಳಿಯ ಮಂಜದಗೋಳಿಯಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಶ್ರೀ ನಾಲ್ಕೈತ್ತಾಯ ದೈವದ ಮೆಚ್ಚಿ ನೇಮೋತ್ಸವ ನಡೆಯುತ್ತದೆ. ಈ ಸಂದರ್ಭ ಸಜೀಪನಡು ಗ್ರಾಮದ ಸಾಣದಿಂದ‌ ಹೊರಟ ಶ್ರೀ ದೈವದ ಭಂಡಾರ ಸಜೀಪಮೂಡ ರಸ್ತೆಯ ಮೂಲಕ ಮಂಜದಗೋಳಿಗೆ ಆಗಮಿಸುತ್ತದೆ. ಈ ಸಂದರ್ಭ ನಂದಾವರ ಜುಮ್ಮಾ ಮಸೀದಿಗೆ ಭೇಟಿ ನೀಡುವ ಕ್ರಮ ಪರಂಪರೆಯಿಂದ ನಡೆದುಕೊಂಡು ಬಂದಿದೆ.

ಮಸೀದಿಯ ಮೂರು ಮೆಟ್ಟಿಲುಗಳನ್ನು ಹತ್ತಿ ದೈವ ಅಭಯ ನೀಡುವ ದೃಶ್ಯವನ್ನು ಕಣ್ತುಂಬಲು ಹಿಂದೂ-ಮುಸ್ಲಿಂ ಬಂಧುಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಮಂಗಳವಾರವೂ ದೈವದ ಭಂಡಾರ ಆಗಮಿಸುವ ವೇಳೆ ಎರಡೂ ಸಮುದಾಯದ ಬಂಧುಗಳು ಭಕ್ತಿ ಶ್ರದ್ದೆಯಿಂದ ಭಾಗವಹಿಸಿದ ದೃಶ್ಯ ಕಂಡು ಬಂದಿದ್ದು, ಈ ಸೌಹಾರ್ದತೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here