ನರಿಕೊಂಬು ಗಿಡ ನೆಡುವ ಕಾರ್ಯಕ್ರಮ

0

ನರಿಕೊಂಬು: ಸಂಘ ಸಂಸ್ಥೆಗಳು ಸೇರಿಕೊಂಡು ನಾಟಿ ಮಾಡಿಕೊಟ್ಟ ಗಿಡಗಳ ಸಂರಕ್ಷಣೆ ಜವಾಬ್ದಾರಿ ಗ್ರಾಮಸ್ಥರಿಗೆ ಸೇರಿದೆ, ಪ್ರತಿಯೊಬ್ಬನು ತಮ್ಮ ಕರ್ತವ್ಯ ಎಂದು ಭಾವಿಸಿ ಗಿಡಗಳನ್ನು ಸಂರಕ್ಷಣೆ ಮಾಡಬೇಕೆಂದು ನರಿ ಕೊಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ಬಿರಾದಾರ್ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬಂಟ್ವಾಳ ಇದರ ತುಂಬೆ ವಲಯದ ಪ್ರಗತಿ ಬಂದು ಸ್ವ-ಸಹಾಯ ಸಂಘ ನರಿಕೊಂಬು ಎ ಹಾಗೂ ನರಿಕೊಂಬು ಬಿ ಒಕ್ಕೂಟ ಹಾಗೂ ನರಿಕೊಂಬು ಗ್ರಾಮ ಪಂಚಾಯತ್ ಇವುಗಳ ಜಂಟಿ ಆಶ್ರಯದಲ್ಲಿ ಹಿಂದೂ ರುದ್ರ ಭೂಮಿ ನಾಯಿಲ ನರಿಕೊಂಬು ಇಲ್ಲಿ ಜರಗಿದ ಸಾರ್ವಜನಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಗಿಡಗಳ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ನಂತರ ಹಿಂದೂ ರುದ್ರ ಭೂಮಿಯ ಆವರಣದಲ್ಲಿ ಗಿಡಗಳ ನೆಡುವ ಮಾಡಲಾಯಿತು ಹಾಗೂ ಯೋಜನೆಯ ಗುಂಪಿನ ಸದಸ್ಯರುಗಳಿಗೆ ಸಸಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪುರುಷೋತ್ತಮ್, ಜಿಲ್ಲಾ ರೈತ ಮೋರ್ಚಾದ ಸದಸ್ಯ ಪ್ರೇಮನಾಥ್ ಶೆಟ್ಟಿ ಅಂತರ, ರುದ್ರ ಭೂಮಿ ಆರಾಧನಾ ಸಮಿತಿಯ ಅಧ್ಯಕ್ಷ ಯಶೋಧರ ಕರ್ಬೆಟ್ಟು , ಪಂಚಾಯತ್ ಸದಸ್ಯರುಗಳಾದ ಕಿರಣ್ ಶೆಟ್ಟಿ ಅಂತರ, ರವಿ ಅಂಚನ್, ಅರುಣ್ ಬೋರುಗುಡ್ಡೆ , ರಂಜಿತ್ ಕೆದ್ದೇಲ್, ವಿಶಲಾಕ್ಷಿ ರಮನಂದ, ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ಕುಸುಮಾವತಿ, ಪ್ರತಿಭಾ ,ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರುಗಳು ಉಪಸ್ಥಿತರಿದ್ದರು.
ನರಿಕೊಂಬು ಎ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ ಸ್ವಾಗತಿಸಿ, ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಸಂತೋಷ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here