ಬಿ.ಎ ಐಟಿಐ ತುಂಬೆ: ಪರಿಸರ ಜಾಗೃತಿ ಕಾರ್ಯಕ್ರಮ

0

ಪುತ್ತೂರು : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕೃಷಿ ವಿಜ್ಞಾನ ಕೇಂದ್ರ (ದ.ಕ) ಮಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಬಿ.ಎ ಕೈಗಾರಿಕಾ ತರಬೇತಿ ತುಂಬೆ ಇವುಗಳ ಸಂಯುಕ್ತಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ “ಪರಿಸರ ಸ್ನೇಹಿ ಜೀವನ ಶೈಲಿ” ಎಂಬ ಕಾರ್ಯಕ್ರಮ ಮೇ.23 ಬಿ.ಎ ಐಟಿಐ ತುಂಬೆಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣಿನ ತಜ್ಞ ಡಾ| ಮಲ್ಲಿಕಾರ್ಜುನ ಎಲ್. ಹಲವಾರು ಉದಾಹರಣೆಗಳೊಂದಿಗೆ, ಮಣ್ಣಿನ
ಫಲವತ್ತತೆಯನ್ನು ಕಾಪಾಡುವುದು, ನೀರಿನ ಬಳಕೆ ಅರಣ್ಯದ ಉಳಿವು ಹೀಗೆ ಹಲವಾರು ವಿಷಯನ್ನು ಪರಿಸರದ ರಕ್ಷಣೆ ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಹೇಗೆ ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದು, ಅದರಿಂದ ಆಗಲಿರುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಜಿಲ್ಲಾ ಸಂಯೋಜಕರಾದ ಜೀವನ್, ಬಿ.ಎ ಕೈಗಾರಿಕಾ ತರಬೇತಿಯ ಕಾರ್ಯವೈಖರಿಯ ಬಗ್ಗೆ ಹರ್ಷ ವ್ಯಕ್ತಪಡಿಸಿ ಧನ್ಯವಾದ ಗೈದರು. ಬಿ ಎ ಐಟಿಐ ಪ್ರಾಚಾರ್ಯರಾದ ನವೀನ್ ಕುಮಾರ್ ಕೆ ಎಸ್ ಪ್ರಸ್ತಾಪಿಸಿ, ಕಿರಿಯ ತರಬೇತಿ ಅಧಿಕಾರಿ ರಾಜೇಶ್ ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here