ಬಂಟ್ವಾಳ : ಕೆಲಸ ಕೊಡಿಸುವುದಾಗಿ 6ಲಕ್ಷ ರೂ ವಂಚನೆಯ ಆರೋಪ-ದೂರು ದಾಖಲು

0

ಬಂಟ್ವಾಳ: ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 6 ಲಕ್ಷ ರೂ ವಂಚನೆ ನಡೆಸಿದ ಘಟನೆಯೊಂದು ಸುದ್ದಿ ಮಾಡುತ್ತಿದೆ.

ಕಳ್ಳಿಗೆ ಗ್ರಾಮದ ಓರ್ವ ಮಹಿಳೆಯ ಮಕ್ಕಳಿಗೆ ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ  ಬಿ.ಸಿ.ರೋಡ್ ನಲ್ಲಿ 2,83,800ರೂ  ನಗದು ಮತ್ತು ಗೂಗಲ್ ಪೇ ಮೂಲಕ ವಿವಿಧ ದಿನಗಳಲ್ಲಿ ಹಣವನ್ನು ತನ್ನ ಅಕೌಂಟಿಗೆ ಹಾಕಿಸಿಕೊಂಡಿದ್ದಾನೆ. ಬಳಿಕ ದೂರು ನೀಡಿದ ಮಹಿಳೆಯ ಮಕ್ಕಳನ್ನು ಮುಂಬಯಿಗೆ ಬರಲು ಹೇಳಿ ಅಲ್ಲಿ ಮಕ್ಕಳಿಂದ ರೂ.15,600 ಹಣವನ್ನು ಪಡೆದು ಬಲ್ಗೆರಿಯಾದಲ್ಲಿ ಚಳಿಯಿರುವುದರಿಂದ ಜಾಕೆಟ್ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದಾತ ವಾಪಾಸು ಬರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾನೆ. ಸುಧೀರ್ ರಾವ್ ಎಂಬಾತನು ಒಟ್ಟು ರೂ.6,30,000  ಹಣವನ್ನು ಕೆಲಸ ಕೊಡಿಸುವುದಾಗಿ ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here