ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ-ಬಂಟ್ವಾಳ ವಿಶ್ವ ಹಿಂದು ಪರಿಷದ್, ಬಜರಂಗದಳದ ಪಾದಯಾತ್ರೆ ಸಂಪನ್ನ

0

ಬಂಟ್ವಾಳ : ವಿಶ್ವಹಿಂದೂಪರಿಷದ್ ಬಜರಂಗದಳ, ಮಾತೃ ಮಂಡಳಿ ದುರ್ಗವಾಹಿನಿ ಬಂಟ್ವಾಳ ಪ್ರಖಂಡದಿಂದ ಆಯೋಜಿಸಿದ್ದ ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ ಬ್ರಹತ್ ಪಾದಯಾತ್ರೆಯು ಪೊಳಲಿ ಕ್ಷೇತ್ರದಲ್ಲಿ ಸಂಪನ್ನಗೊಂಡಿತು.

ಸುಮಾರು 7000ಕ್ಕೂ ಮಿಗಿಲಾಗಿ ಪೊಳಲಿ ಕ್ಷೇತ್ರದ ಭಕ್ತರು ಈ ಪಾದಯಾತ್ರೆಯಲ್ಲಿ ಬಾಗವಹಿಸಿದ್ದರು.


ಬಿಸಿರೋಡ್ ಕೈಕಂಬ ದ್ವಾರ ,ಕಡೆಗೋಳಿ ದ್ವಾರ, ಗುರುಪುರ ಕೈಕಂಬ ದ್ವಾರ, ಹೊರಟ ಬ್ರಹತ್ ಪಾದಯಾತ್ರೆ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಸನ್ನಿದಾನದಲ್ಲಿ ಮುಕ್ತಾಯಗೊಂಡಿತು.

ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿ, ಗೋ ಶಾಲೆ ನಿರ್ಮಾಣ ಹಾಗೂ ಬಡ ಹಿಂದೂ ಹೆಣ್ಣುಮಕ್ಕಳ ಮದುವೆಗೆ ಕ್ಷೇತ್ರದಿಂದ ಉಚಿತ ಸಾಮೂಹಿಕ ಮದುವೆ ,ಭಕ್ತರ ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸುವಂತೆ ಶ್ರೀ ಕ್ಷೇತ್ರದ ಆಡಳಿತ ಮಂಡಳಿಗೆ ಮನವಿಯನ್ನು ನೀಡಲಾಯಿತು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಂತಪ್ಪ ಶೆಟ್ಟಿ ಕೊಡ್ಮಾನ್ ,ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ದೇಲ್, ಸಹಸಂಚಾಲಕ ಗುರುರಾಜ್ ಬಂಟ್ವಾಳ, ಪ್ರಸಾದ್ ಕುಮಾರ್ ರೈ ,ದೀಪಕ್ ಆಜೆಕಲ ,ಶಿವಪ್ರಸಾದ್ ತುಂಬೆ ,ಸುರೇಶ್ ಬೆಂಜನಪದವು, ಸಂತೋಷ್ ಸರಪಾಡಿ ,ಕಿರಣ್ ಕುಮ್ದೇಲ್, ಪ್ರಸಾದ್ ಶಿವಾಜಿನಗರ, ಬೆಂಜನಪದವು ಅಭಿನ್ ರೈ, ಪ್ರವೀಣ್ ಕುಂಟಾಲಫಲ್ಕೆ ,ಸಂದೇಶ್ ಕಾಡಬೆಟ್ಟು, ಲೋಕೇಶ್ ಲಚ್ಚಿಲ್, ರೋಹಿತ್ ಪೋಡಿಕಲ, ಘಟಕಗಳ ಸದಸ್ಯರು ಕಾರ್ಯಕರ್ತರು ಗುರುಪುರ ಪ್ರಖಂಡದ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here