ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ದೀಪಪ್ರದಾನ ಕಾರ್ಯಕ್ರಮ

0

ಕಲ್ಲಡ್ಕ : ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 7 ನೇ ತರಗತಿಯ ಬೀಳ್ಕೊಡುಗೆ ದೀಪಪ್ರದಾನ ಕಾರ್ಯಕ್ರಮ ಮಾ.29ರಂದು ನಡೆಯಿತು.


ಬೆಂಗಳೂರು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತಾನಾಡಿ ನಾನು ವಿದ್ಯಾಸಂಸ್ಥೆಯ ಆವರಣದಲ್ಲಿ ಕಳೆದ ಅಷ್ಟು ಸಮಯ ನನ್ನಷ್ಟಕ್ಕೆ ನಾನು ಅಂತರ್ಮುಖಿಯಾಗಿದ್ದೇನೆ. ಪತ್ರಕರ್ತನಾಗಿರುವ ನಾನು ಎಲ್ಲಾದರೂ ತಪ್ಪು ಸಿಗುತ್ತದೆಯೋ ಎಂದು ಹುಡುಕುತ್ತಿದ್ದಾಗ ನನಗೆ ತೃಣ ಮಾತ್ರದಷ್ಟು ತಪ್ಪು ಸಿಗಲಿಲ್ಲ. ಸಣ್ಣ ಸಣ್ಣ ಸಂಗತಿಗಳು ನಮ್ಮ ಜೀವನವನ್ನು ಸುಧಾರಿಸುತ್ತದೆ. ಸಾಧ್ಯವಾದರೆ ಆ ಸಣ್ಣ ಸಂಗತಿಗಳು ಜಗತ್ತನ್ನೆ ಬದಲಿಸಬಹುದು.ಅಂತೆಯೇ ಈ ಜಗತ್ತನ್ನು ಬದಲಾಯಿಸಲು ಸಣ್ಣ ಹಣತೆ ಸಾಕು.ಇವತ್ತಿನ ದೀಪ ಪ್ರದಾನ ಕಾರ್ಯಕ್ರಮದಲ್ಲಿ ದೀಪ ಪ್ರದಾನ ಎನ್ನುವ ಹೆಸರೇ ಅದ್ಬುತವಾದ ಪದ ಪ್ರಯೋಗವಾಗಿದೆ.ಒಂದು ದೀಪದಿಂದ ಲಕ್ಷ ದೀಪವನ್ನು ಕೋಟಿ ದೀಪವನ್ನು ಬೆಳಗಲು ಸಾಧ್ಯ. ಈ ಶಾಲೆಯಲ್ಲಿ ಕಲಿತ ಮಗು ಜ್ಞಾನ-ಸಂಸ್ಕೃತಿ ಪ್ರಸಾರದಲ್ಲಿ ಇಡೀ ಜಗತ್ತನ್ನು ಆವರಿಸಿದರೆ ಅದು ಅತಿಶಯೋಕ್ತಿಯಲ್ಲ. ಯಾಕೆಂದರೆ ಈ ಮಣ್ಣಿನಗುಣ ಆ ರೀತಿಇದೆ ಈ ಶಾಲೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ,ಧೃಡ ನಿಲುವನ್ನು ನೋಡಿ ಸಂತಸವಾಯಿತು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ನಿರ್ವಿಘ್ನವಾಗಿ ಸಾಗಲಿ ಎಂಬ ಆಶಯದೊಂದಿಗೆ ಅತಿಥಿಗಳಿಂದ ದೀಪ ಪ್ರಜ್ವಲನೆ ಮತ್ತು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ದೈನಂದಿನ ಪ್ರಾರ್ಥನೆಯಾದ ಸರಸ್ವತಿ ವಂದನೆ ಅಗ್ನಿ

ಹೋತ್ರದೊಂದಿಗೆ ನಡೆಯಿತು.ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆಗೈದು ,ತಿಲಕಧಾರಣೆ ಮಾಡಿಸಿ, ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು.


ಭಾರತದಲ್ಲಿ ಶಿಕ್ಷಣ ಇದೆ, ಆದರೆ ಶಿಕ್ಷಣದಲ್ಲಿ ಭಾರತೀಯತೆ ಇಲ್ಲ. ವಿದ್ಯೆಯೆಂದರೆ ಅದರ ಜೊತೆಗೆ ಸಂಸ್ಕಾರವಿರಬೇಕು.ಸಂಸ್ಕಾರದೊಂದಿಗೆ ಶಿಕ್ಷಣ ಈ ಸಂಸ್ಥೆಯ ಮೂಲ ಉದ್ದೇಶ. ಕಳೆದ 40 ವರ್ಷಗಳಿಂದ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ ಬಂದಿರುತ್ತೇವೆ. ಭಯಂಕರ ಕತ್ತಲೆಯ ಮಧ್ಯೆ ಸಣ್ಣದೀಪ ಹಚ್ಚುವಂತೆ ಈ ವಿದ್ಯಾ ಸಂಸ್ಥೆ ಕೆಲಸ ಮಾಡುತ್ತಿದೆ.ದೀಪ ಎಂದರೆ ಜ್ಞಾನದ ಸಂಕೇತ.ಅದುವೇ ಮುಂದೆ ಹೋಗಲು ದಾರಿ ದೀಪವಾಗುತ್ತದೆ.ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ ಹೇಳಿದರು.


ತಮ್ಮ ಬಾಳಿನ ಪಥದಲ್ಲಿ ಜೀವನವೆಂಬ ಪುಷ್ಪ ಅರಳಿ ತನ್ನ ಕಂಪನ್ನು ಎಲ್ಲೆಡೆ ಪಸರಿಸಲಿ ಎಂಬ ಆಶಯದೊಂದಿಗೆ 6ನೇ ವಿದ್ಯಾರ್ಥಿಗಳು 7ನೇ ತರಗತಿ ವಿದ್ಯಾರ್ಥಿಗಳಿಗೆ ಪುಷ್ಪ ಪ್ರಧಾನ ಮಾಡಿದರು.7ನೇ ತರಗತಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಮಾಡಿ, ಸವಿನೆನಪುಗಳನ್ನು ಹಂಚಿಕೊಂಡರು.


ವೇದಿಕೆಯಲ್ಲಿ ಕೋಲಾರ ಜಿಲ್ಲೆಯ ಮಾನ್ಯ ಲೋಕಸಭಾ ಸದಸ್ಯರಾದ ಎಸ್ ಮುನಿಸ್ವಾಮಿ ಹಾಗೂ ಅವರ ಧರ್ಮಪತ್ನಿ ಶೈಲಜಾ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಯತೀಯ ಜನತಾ ಪಕ್ಷದ ಪ್ರಕೋಷ್ಠ ಸಂಚಾಲಕ ಧೀರಜ್ ಮುನಿರಾಜ್, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಜಿ. ಚಂದ್ರಶೇಖರ, ತುಮಕೂರು ಕಲ್ಕಿ ರೈಸ್‌ ಕಾರ್ನರ್ ಮಾಲಕ ಆರ್.ಎಲ್. ರಮೇಶ್ ಬಾಬು, ಕರ್ನಾಟಕ ಸರಕಾರ ಇ-ಆಡಳಿತ ಇಲಾಖೆಯ ಯೋಜನಾ ನಿರ್ದೇಶಕ ವರ ಪ್ರಸಾದ್‌ರೆಡ್ಡಿ, ಮಂಗಳೂರು ಮಾರುಕಟ್ಟೆ ಅಭಿವೃದ್ಧಿ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಕೆ.ಬಿ. ಕೀರ್ತನ್‌ ಕುಮಾರ್, ಮಣಿಪಾಲ ಮಹಾಮಾಯಾ ಪೌಂಡೇಶನ್‌ನ ಕಾರ್ಯದರ್ಶಿಯಾದ ಕೆ.ಉಷಾ ಎಸ್ ಪೈ, ಬೆಂಗಳೂರಿನ ಉದ್ಯಮಿಯಾದ ಚೈತನ್ಯ ಆದಿ ಕೇಶವಳು, ಅಂಕಣಕಾರ ಜಿತೇಂದ್ರ ಕುಂದೇಶ್ವರ, ಮಂಗಳೂರು ಪ್ಲಾಂಟ್-ಟೆಕ್ ಇಂಡಸ್ಟ್ರಿಯಲ್ ಸರ್ವಿಸಸ್ ಲಿಮಿಟೆಡ್ ಸಿ.ಇ.ಒ ಅಭಯ್‌ತಾರ್ತೆ,ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ , ಸಂಚಾಲಕರಾದ ವಸಂತ ಮಾಧವ, ಹಾಗೂ ಮುಖ್ಯೋಪಾಧ್ಯಾಯರಾದರ ವಿರಾಜ್‌ ಕಣಂತೂರು ,ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಡಾ|ಕಮಲಾ ಪ್ರಭಾಕರ್ ಭಟ್‌ ಕಲ್ಲಡ್ಕ ,ಆಡಳಿತ ಮಂಡಳಿಯ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ,ಮಾತೃ ಭಾರತಿ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ

7ನೇ ತರಗತಿಯ ವಿದ್ಯಾರ್ಥಿಯಾದ ಧಾತ್ರಿ ಪ್ರೇರಣಾಗೀತೆಯನ್ನು ಹಾಡಿದರು.
ಕಾರ್ಯಕ್ರಮವನ್ನು ಸುಶ್ಮಿತಾ ಭಟ್ ಸ್ವಾಗತಿಸಿ , ವೈಷ್ಣವಿ ಕಾಮತ್ ನಿರೂಪಿಸಿ ,ಆದಿತ್ಯ ವಂದಿಸಿದರು.

LEAVE A REPLY

Please enter your comment!
Please enter your name here