ಬಂಟ್ವಾಳ : ಬೆಳೆಯುತ್ತಿರುವ ಪುಂಜಾಲಕಟ್ಟೆ ಗೆ ಈಗಾಗಲೇ 12.44 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ.ಹೆದ್ದಾರಿ ಯನ್ನು ಕೂಡ ದ್ವಿಪಥವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಭವಿಷ್ಯದ ಲ್ಲಿ ಪುಂಜಾಲಕಟ್ಟೆ ಸರ್ವಾಂಗೀಣ ಅಭಿವೃದ್ಧಿಗೊಳ್ಳಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು ರೂ. 8 ಕೋಟಿಗಿಂತಲೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕ ನೂತನವಾಗಿ ನಿರ್ಮಾಣ ಮಾಡಲಾದ ಪಿಲಾತಬೆಟ್ಟು ಗ್ರಾ.ಪಂ.ಸಭಾಂಗಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರ್ಷಿಣಿಪುಷ್ಪಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಎಂ.ಬಂಗೇರ,ಉಪಾಧ್ಯಕ್ಷ ಲಕ್ಮೀನಾರಾಯಣ, ಸದಸ್ಯರಾದ ನೆಲ್ವಿಸ್ಟರ್ ಪಿಂಟೋ,ಕಾಂತಪ್ಪ ಕರ್ಕೇರ, ಲೀಲಾವತಿ ಶೆಟ್ಟಿ, ವನಿತಾ, ಶಾರದ, ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪಿಡಿಒ ಯಮನಪ್ಪ ಕೊರವರ,ಲೆಕ್ಕಾಧಿಕಾರಿ ಬಾಲಕೃಷ್ಣ ಪೂಜಾರಿ,ಸಂಜೀವಿನಿ ಮೇಲ್ವಿಚಾರಕಿ ನಳಿನಾಕ್ಷಿ ಮತ್ತು ಗ್ರಾ.ಪಂ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಿಲಾತಬೆತಟ್ಟು ಗ್ರಾ.ಪಂ.ನ ಘನತ್ಯಾಜ್ಯ ಘಟಕ, ಹಿಂದೂ ರುದ್ರ ಭೂಮಿ, ವಿವಿಧ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ,ಕಲ್ಲಬೆಟ್ಟು ದುರ್ಗಾಪರಮೇಶ್ವರಿ ದೇವಸ್ಥಾನ ದೇವಸ್ಥಾನದ ತಡೆಗೋಡೆ ಶಿಲಾನ್ಯಾಸ ನೆರವೇರಿಸಲಾಯಿತು.