ಮಾಣಿಕ್ಯ ಸೇವಾಪಯಣದ ಮೂಲಕ ಜೀವಕಾರುಣ್ಯ

0

ಬಂಟ್ವಾಳ : ಫೆ.4ರಂದು ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ನಡೆದ ದುರ್ಘಟನೆಯಲ್ಲಿ ತನ್ನ ಬಲ ಅಂಗೈಯನ್ನು ಕಳೆದುಕೊಂಡಿರುವ ಪುತ್ತೂರು ತಾಲೂಕು, ಆರ್ಯಾಪು ಗ್ರಾಮದ ಕರಿಮೊಗರು ನಿವಾಸಿ ಕೂಲಿ ಕಾರ್ಮಿಕ 25 ವರ್ಷದ ಹರೀಶ್‌ ಎಂಬುವರ ಚಿಕಿತ್ಸೆಗಾಗಿ ” ಮಾಣಿಕ್ಯ ಸೇವಾ ಪಯಣ”ವನ್ನು ಆರಂಭಿಸಲಾಗಿದೆ.

ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ ಸಂದರ್ಭದಲ್ಲಿ ಒಂದು ದಿನದ ಧನ ಸಂಗ್ರಹ ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಸಮಿತಿ ಅನುಮತಿಯೊಂದಿಗೆ ನಡೆಯಲಿದೆ.

ಮಾರ್ಚ್‌ 7ರಂದು ಮೆಚ್ಚಿ ಜಾತ್ರೆ ನಡೆಯಲಿದ್ದು ಅಂದು ಬೆ.9.30ರಿಂದ” ಮಾಣಿಕ್ಯ ಸೇವಾ ಪಯಣ” ಆರಂಭಗೊಳ್ಳಲಿದೆ.

ಟೈಲ್ಸ್‌ ಹಾಕುವ ಕಾರ್ಮಿಕನಾಗಿ ದುಡಿಯುತ್ತಿದ್ದ ಹರೀಶ್‌ ಅಂಗೈ ಚಿಕಿತ್ಸೆಗೆ ಸುಮಾರು 5 ಲಕ್ಷ ರೂಪಾಯಿಯ ಅವಶ್ಯಕತೆಯಿದ್ದು ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಕುಟುಂಬಕ್ಕೆ ತುಳುನಾಡಿನ ಮಹಾದಾನಿಗಳ ನೆರವೇ ಜೀವನಾಧರವಾಗಿದೆ.

LEAVE A REPLY

Please enter your comment!
Please enter your name here