ವಿಟ್ಲ: ಸಮಾಜದಲ್ಲಿ ಸಮಾನತೆ ಕಾಯ್ದುಕೊಳ್ಳುವಲ್ಲಿ ಸಮವಸ್ತ್ರದ ಪಾತ್ರ ಮಹತ್ತರವಾದುದು. ಸಮಾಜದಲ್ಲಿ ಮೇಲು ಕೀಳೆನ್ನದೆ ಸಮಾನತೆಯಿಂದ ಬದುಕುವ ಮನಸ್ಸು ನಮ್ಮದಾಗಬೇಕು. ಸಮಾಜದಲ್ಲಿ ನಮ್ಮಿಂದಾದ ಸಹಾಯವನ್ನು ಮಾಡುವ ಮೂಲಕ ಸಮಾಜಮುಖಿಯಾಗಿ ಬಾಳಿ ಬದುಕಬೇಕು. ಜನ್ಮದಿನೋತ್ಸವಕ್ಕೆ ಶುಭಕೋರಿದ ಭಕ್ತ ಸಮೂಹಕ್ಕೆ ದೇವರು ಒಳಿತು ಮಾಡಲಿ ಎಂದು ಶ್ರೀ ಕಾಳಿಕಾಬ ಅಂಜನೇಯ ಕ್ಷೇತ್ರದ ಶ್ರೀ ಶ್ರೀಕೃಷ್ಣ ಗುರೂಜಿಯವರು ಹೇಳಿದರು.
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಜು.29ರಂದು ತನ್ನ ಜನ್ಮದಿನೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ನಡೆದ ಬಾಲಬೋಜನ ಹಾಗೂ ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿ ಆಶೀರ್ವಚನ ನೀಡಿದರು.
ಸ್ಥಳೀಯ ಅಂಗನವಾಡಿ ಶಿಕ್ಷಕಿ ರೇವತಿ ಕುಕ್ಕಾಜೆ ರವರು ಮಾತನಾಡಿ ಕ್ಷೇತ್ರದಿಂದ ನಿರಂತರವಾಗಿ ದಾನ ಧರ್ಮಾದಿಗಳು ನಡೆಯುತ್ತಿದ್ದು, ಇಂದಿಲ್ಲಿ ನಮ್ಮ ಶಾಲಾ ಮಕ್ಕಳಿಗೆ ಗುರೂಜಿಯವರು ತನ್ನ ಜನ್ಮದಿನೋತ್ಸವದ ಅಂಗವಾಗಿ ಸಮವಸ್ತ್ರವನ್ನು ನೀಡಿರುವುದು ನಮಗೆ ತುಂಬ ಸಂತಸ ತಂದಿದೆ ಎಂದರು.
ಯೊಗೀಶ್ ಸ್ವಾಮಿ ಬೊಂಡಾಳ, ಅಂಗನವಾಡಿ ಸಹಾಯಕಿ ಪ್ರೇಮ ತಾರಿದಳ, ಅಂಗನವಾಡಿಯ ಬಾಲ ವಿಕಾಸ ಅಧ್ಯಕ್ಷೆ ಚಿತ್ರಲತಾ ಪಿ,
ಕಾಳಿಕಾ ಮಹಿಳಾ ಸಮಿತಿ ಅಧ್ಯಕ್ಷೆ ಮೋಹಿನಿ ತಾರಿದಳ, ಕಾಳಿಕಾ ಕಲಾ ಸಂಘದ ಅಧ್ಯಕ್ಷ ಸಂಜೀವ ಕುಳಾಲ್ ಪಳನೀರು,ಲಕ್ಷಣ ಪಿಲಿಂಗುರಿ, ಶ್ರೀಧರ್, ಶೊಭಾ ಪಿ.ಕೆ., ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತ್ಯಪ್ರಸಾದ್ ಸ್ವಾಗತಿಸಿದರು, ರವಿ ಎಂ.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಗುರೂಜಿಯವರ ಜನ್ಮದಿನೋತ್ಸವದ ಅಂಗವಾಗಿ ಮೈಸೂರಿನಲ್ಲಿರುವ ಕ್ಷೇತ್ರದ ಭಕ್ತರಾದ ಅರ್ಪಿತ್ ಮೈಸೂರುರವರು ಗುರೂಜಿರವರಿಗೆ ಚಿನ್ನದ ರಾಜಮುದ್ರೆಯನ್ನು ಅರ್ಪಿಸಿದರು.