ಬೆಂಗಳೂರು : ರಾಜ್ಯದಲ್ಲಿ ಸುಮಾರು 1316 ಅನುದಾನ ರಹಿತ ಖಾಸಗಿ ಶಾಲೆಗಳು ಅನಧಿಕೃತವಾಗಿ ಕಾರ್ಯಚರಿಸುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಗುರುತಿಸಿದೆ.
ಬೆಂಗಳೂರು ಉತ್ತರದ 485 ಬೆಂಗಳೂರು ದಕ್ಷಿಣದ 386, ತುಮಕೂರು ಜಿಲ್ಲೆಯ 66 ಶಾಲೆಗಳು ಅನಧಿಕೃತ ಎಂದು ಗುರುತಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರವೇ ಪಟ್ಟಿ ಬಿಡುಗಡೆ ಮಾಡುವುದಾಗಿ ಶಿಕ್ಷಣ ಸಚಿವ ಬಿ.ನಾಗೇಶ್ ಮಾಹಿತಿ ನೀಡಿದ್ದಾರೆ. ಉಳಿದಂತೆ ನೋಂದಣಿ ಮಾಡದ 63, ಅನುಮತಿ ಪಡೆಯದೆ ಮೇಲ್ದರ್ಜೆಗೇರಿಸಿದ 74, ಸ್ಟೇಟ್ ಸಿಲೆಬಸ್ ಇದ್ದರೂ ಸಿಬಿಎಸ್‌ಇ ಎಂದು ಪ್ರವೇಶ ನೀಡುತ್ತಿರುವ 95, ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲೀಷ್ ಮಾಧ್ಯಮದಲ್ಲಿ ಭೋದಿಸುತ್ತಿರುವ 294, ಅನುಮತಿಗಿಂತ ಹೆಚ್ಚು ವಿಭಾಗ ತೆರೆದ 620, ಅನುಮತಿ ಪಡೆಯದೆ ಸ್ಥಳಾಂತರಿಸಿದ 141 ಶಾಲೆಗಳು ಪತ್ತೆಯಾಗಿದ್ದು ಪಟ್ಟಿಯಲ್ಲಿದೆ ಎಂದು ಸಚಿವರು ಹೇಳಿದ್ದಾರೆ.