ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತ್ ನೌಕರರು ಸರಕಾರಿ ನೌಕರರಾಗುವುದಿಲ್ಲ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಇಂದು ಮಾಹಿತಿ ನೀಡಿದ ಸಚಿವರು, ಗ್ರಾಮ ಪಂಚಾಯತ್ ನೌಕರರು, ಸರಕಾರಿ ನೌಕರರಾಗುವುದಿಲ್ಲ. ಸದರಿ ನೌಕರರು ಸ್ಥಳೀಯ ಪ್ರಾಧಿಕಾರ ಗ್ರಾಮ ಪಂಚಾಯತ್ ನೌಕರರಾಗಿದ್ದು ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸರಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿ ಪಡಿಸಲು ಆಡಳಿತಾತ್ಮಕವಾಗಿ ಸಾಧ್ಯವಿಲ್ಲ ಎಂದು ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿ ಸಚಿವರು ಹೇಳಿದ್ದಾರೆ.