ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ನಾಗನವಳಚ್ಚಿಲು ಮಾರ್ನಬೈಲು ಇದರ ಸುವರ್ಣ ಮಹೋತ್ಸವ ವರ್ಷದ ಯಕ್ಷಗಾನ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ನಂದಾವರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ ಬಿಡುಗಡೆಗೊಳಿಸಿದರು. ಕ್ಷೇತ್ರದ ಅರ್ಚಕ ಪ್ರಕಾಶ್ ಮರಾಠೆ ಪೂಜೆ ವಿಧಿ ನೆರವೇರಿಸಿ, ಶುಭ ಹಾರೈಸಿದರು.
ಈ ಬಗ್ಗೆ ನಡೆಯುವ ಕಾರ್ಯಕ್ರಮದ ಮಾಹಿತಿ ನೀಡಿದ ಸುವರ್ಣ ಮಹೋತ್ಸವ ಸಮಿತಿ ಸಂಯೋಜಕ ದಾಮೋದರ ಬಿ.ಎಂ,
ಫೆಬ್ರವರಿ 17ರಂದು ಲೋಕ ಕಲ್ಯಾಣಾರ್ಥ ನಡೆಯುವ ಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ, ದಾರ್ಮಿಕ ಸಭೆ, ಸಾಧಕರ ಸನ್ಮಾನ, ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ನೃತ್ಯ ವೈಭವ ಹಾಗೂ ಫೆಬ್ರವರಿ 18ರಂದು ದುರ್ಗಾ ಹೋಮ, ಮೇಳದ ದೇವರಿಗೆ ಚಿನ್ನದ ಸರ ಸಮರ್ಪಣೆ, ಯಕ್ಷಗಾನ ಬಯಲಾಟ, ಅನ್ನಸಂತರ್ಪಣೆ, ಫೆಬ್ರವರಿ 19ರಂದು ಸೇವಾ ಬಾಬ್ತು ನಡೆಯುವ ಯಕ್ಷಗಾನ ಬಯಲಾಟ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವಂತಾಗಲು ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸಂದೀಪ್ ಕುಮಾರ್ ನಾಗನವಳಚ್ಚಿಲು, ಪ್ರಮುಖರಾದ ಶಿವಶಂಕರ ನಂದಾವರ, ಎನ್. ಕೆ. ಶಿವ ಖಂಡಿಗ, ಶಶಿಧರ ಆಳ್ವ ದಾಸರಗುಡ್ಡೆ, ಕ್ಷೇತ್ರದ ವ್ಯವಸ್ಥಾಪಕ ರಾಮಕೃಷ್ಣ ಭಂಡಾರಿ ಭಾಗವಹಿಸಿದ್ದರು. ಸುವರ್ಣ ಮಹೋತ್ಸವ ಸಮಿತಿ ಕೋಶಾಧಿಕಾರಿ ಗೋಪಾಲಕೃಷ್ಣ ಸುಂದರ್, ಲೆಕ್ಕಪರಿಶೋಧಕ ರಾಮಪ್ಪ ಮಾಸ್ತರ್, ಉಪಾಧ್ಯಕ್ಷರಾದ ರೂಪೇಶ್ ಆಚಾರ್ಯ, ಕಾರ್ಯದರ್ಶಿಗಳಾದ ಸೋಮನಾಥ ಬಿ.ಎಂ., ದೇವದಾಸ ಮಾಸ್ತರ್, ಮಹಿಳಾ ಸಮಿತಿ ಸಂಚಾಲಕಿ ಶಕುಂತಲಾ ಅಶೋಕ್ ಗಟ್ಟಿ, ಬಬಿತಾ ಸಂದೀಪ್, ದೇವಿಕಾ ದಾಮೋದರ್, ವಿಶ್ವರಾಜ್ ಆಚಾರ್ಯ, ಸಂಜಯ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.