ಬಂಟ್ವಾಳ : ಶಾಸಕರ ಗ್ರಾಮವಿಕಾಸ ಯಾತ್ರೆಗೆ ನಳಿನ್‌ ಚಾಲನೆ

0

ಬಂಟ್ವಾಳ : ಜ.14 ರಿಂದ 26 ರ ವರೆಗೆ ಬಂಟ್ವಾಳ ಬಿಜೆಪಿ ವತಿಯಿಂದ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತ್ರತ್ವದಲ್ಲಿ ನಡೆಯುವ ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಗೆ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪಕ್ಷದ ಧ್ವಜವನ್ನು ಶಾಸಕರಿಗೆ ಹಸ್ತಾಂತರಿಸಿದ ಕಟೀಲ್‌ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದರು. ನೂರಾರು ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯದೊಂದಿಗೆ ಬಂಟ್ವಾಳವನ್ನು ಶಾಂತಿಯ ಬೀಡಾಗಿ ಮಾರಾಡು ಮಾಡಿದ ಕೀರ್ತಿ ರಾಜೇಶ್‌ ಅವರದ್ದು, ಸ್ಯಾಂಡ್ ಮಾಫಿಯಾ, ಲ್ಯಾಂಡ್ ಮಾಫಿಯಾ, ಗೂಂಡಾಗಿರಿಯ ರಾಜಕಾರಣ ನಿಂತುಹೋಗಿದ್ದು ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಆತಂಕವಾದ , ಭ್ರಷ್ಟಾಚಾರವಾದ, ಪರಿವಾರವಾದ ಈ ದೇಶಕ್ಕೆ ಕಾಂಗ್ರೆಸ್ ನೀಡಿರುವ ದೊಡ್ಡ ಕೊಡುಗೆಯಾಗಿದ್ದು ಇದಕ್ಕೆ ಬಿಜೆಪಿ ತಿಲಾಂಜಲಿ ಹಾಕಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದ್ದು, ಸರ್ವ ಜನರ ಜೀವನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಕಿಕೊಂಡಿದ್ದಾರೆ.

ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಭಯೋತ್ಪಾದಕ ದಾಳಿಗಳು ನಡೆದಿದ್ದು ಮಂಗಳೂರು ಕುಕ್ಕರ್ ಬಾಂಬ್ ದಾಳಿಗೂ ಕಾಂಗ್ರೆಸ್ ಗೂ ಲಿಂಕ್ ಇದೆ ಎಂದು ಆರೋಪಿಸಿದರು. ಅಭಿವೃದ್ದಿ ಕಾರ್ಯಕ್ರಮಗಳ ಮೂಲಕ ಭಾರತವನ್ನು ಜೋಡಿಸಿದ್ದು ಪ್ರದಾನಿ ಮೋದಿಯೇ ಹೊರತು ರಾಹುಲ್ ಗಾಂಧಿ ಅಲ್ಲ, ಎಂದು ಟೀಕಿಸಿದರು.ಹರ್ಷ ಮತ್ತು ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿದ ಸಂಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತ್ರತ್ವದ ಸರಕಾರ ನಿಷೇಧ ಮಾಡಿದೆ.
ಮುಂದಿನ ಚುನಾವಣೆಯಲ್ಲಿ 150 ಕ್ಕೂ ಅಧಿಕ ಸ್ಥಾನವನ್ನು ಪಡೆಯುವ ಮೂಲಕ ಬಿಜೆಪಿ ಅಧಿಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಯಾವುದೇ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ, ಮುಂದೆಯೂ ನಿಮ್ಮ ಸಹಕಾರ ಆಶಿರ್ವಾದ ಇರಲಿ ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ತುಂಗಪ್ಪ ಬಂಗೇರ, ಅರುಣ್ ರೋಶನ್ ಡಿ.ಸೋಜ, ರಾಮ್ ದಾಸ ಬಂಟ್ವಾಳ, ಮಾದವ ಮಾವೆ,ಸುದರ್ಶನ್ ಬಜ, ಪೊಳಲಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್, ಅರ್ಚಕ ರಾಮ್ ಭಟ್, ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ರವೀಂದ್ರ ಕಂಬಳಿ, ಜಗದೀಶ್ ಅಧಿಕಾರಿ,ವೆಂಕಟೇಶ ನಾವಡ, ಯಶವಂತ ಪೊಳಲಿ, ಚಂದ್ರಾವತಿ ಕರಿಯಂಗಳ, ಕಿಶೋರ್ ಪಲ್ಲಿಪಾಡಿ, ಲೋಕೇಶ್ ಭರಣಿ, ಸುಕೇಶ್ ಚೌಟ, ವಿವೇಕ್ ಶೆಟ್ಟಿ ನಗ್ರಿಗುತ್ತು, ಡಾ| ಪ್ರಶಾಂತ್ ಮಾರ್ಲ, ಸದಾನಂದ ಶೆಟ್ಟಿ ರಂಗೋಲಿ, ದಿನೇಶ್ ಅಮ್ಟೂರು, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಪುಷ್ಪರಾಜ್ ಚೌಟ, ಗಣೇಶ್ ರೈ ಮಾಣಿ, ಚರಣ್ ಜುಮಾದಿಗುಡ್ಡೆ, ಯಶೋಧರ ಕರ್ಬೆಟ್ಟು, ಹರ್ಷಿಣಿ ಪುಷ್ಪಾನಂದ, ವಿದ್ಯಾವತಿಪ್ರಮೋದ್ ಕುಮಾರ್, ಸವಿತಾ ಶೆಟ್ಟಿ, ಲಖಿತ್ ಆರ್ ಶೆಟ್ಟಿ, ರೇಖಾ ಪೈ, ರೊನಾಲ್ಡೊ ಡಿ.ಸೋಜ, ಪ್ರಕಾಶ್ ಅಂಚನ್, ಚಿದಾನಂದ ರೈ , ಮೋಹನ್ ಪಿ.ಎಸ್.ಪುರುಷೋತ್ತಮ ಪೂಜಾರಿ ನರಿಕೊಂಬು, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ, ಸುರೇಶ್ ಕೋಟ್ಯಾನ್, ಪ್ರಭಾಕರ್ ಪ್ರಭು, ದೇವಿಪ್ರಸಾದ್ ಕೆಲಿಂಜ, ಗೋಪಾಲ ಸುವರ್ಣ, ಕೃಷ್ಣಪ್ಪ ಪೂಜಾರಿ, ಉದಯರಾವ್ ಬಂಟ್ವಾಳ, ಸೀಮಾ ಮಾದವ, ಸುಷ್ಮಾಚರಣ್, ಆಶಾ ಪಿ.ಶೆಟ್ಟಿ, ಮೊನಪ್ಪ ದೇವಶ್ಯ, ನಳಿನ್ ಬಿ‌‌.ಶೆಟ್ಟಿ, ವಿದ್ಯಾದರ ರೈ, ನಂದರಾಮ ರೈ, ರತ್ನಕುಮಾರ್ ಚೌಟ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here