ಕಲ್ಲಡ್ಕ : ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಜಿಲ್ಲಾ ಘಟಕ ರಚನೆ

0

ಬಂಟ್ವಾಳ : ಪ್ರಾಥಾಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ರಚನೆಯನ್ನು ಬಂಟ್ವಾಳ ತಾಲೂಕು ಮುಖ್ಯ ಶಿಷಕ ಸಂಘದ ಅಧ್ಯಕ್ಷ ವೀರಕಂಬ ಮಜಿ ಶಾಲೆಯ ಮು.ಶಿಕ್ಷಕ ನಾರಾಯಣ್‌ ಪೂಜಾರಿ ಎಸ್‌ ಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಚಿಸಲಾಯಿತು. ಕಲ್ಲಡ್ಕ ಮಾ.ಹಿ.ಪ್ರಾ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ನಾರಾಯಣ ಪೂಜಾರಿ ಉದ್ಘಾಟಿಸಿದರು.

ಜಿಲ್ಲಾ ಘಟಕಕ್ಕೆ ಗೌರವಾಧ್ಯಕ್ಷರಾಗಿ ಮಜಿ ಶಾಲೆಯ ನಾರಾಯಣ ಪೂಜಾರಿ ಎಸ್.ಕೆ. ಅಧ್ಯಕ್ಷರಾಗಿ ನಿಂಗರಾಜು ಕೆ.ಪಿ ಅಲಂಕಾರು , ಉಪಾಧ್ಯಕ್ಷರಾಗಿ ಬಾಬು ಟಿ ಹಿರೆಬಂಡಾಡಿ ಮತ್ತು ಮಹಾಲಿಂಗ ಬೆಳ್ತಂಗಡಿ, ಪ್ರಧಾನಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಬನ ಸುಳ್ಯ, ಜತೆ ಕಾರ್ಯದರ್ಶಿಯಾಗಿ ಪ್ರೇಮ ಕೆ.ಕೆ.ಕಾವಳಮುಡೂರು, ಮತ್ತು ಶಾರದಾ ಕಡಬ,
ಕೋಶಾಧಿಕಾರಿಯಾಗಿ ಪುಟ್ಟರಂಗನಾಥ ಟಿ ಬಂಟ್ವಾಳ, ಸಂಘಟನಾ ಕಾರ್ಯದರ್ಶಿಗಳಾಗಿ ಸುನಂದಾ ಸುಳ್ಯ ಮತ್ತು ಸುರೇಶ್ ಬೆಳ್ತಂಗಡಿ, ನಿರ್ದೇಶಕರಾಗಿ ಶಂಕರ್ ನಾರ್ಶಮೈದಾನ ಮತ್ತು ಮಹೇಶ್ ಕಡಬ ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ನಿಂಗರಾಜ್‌ ಕೆ.ಪಿ, ಮುಖ್ಯ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸಂಘದೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತೇನೆಂಬ ಭರವಸೆಯನ್ನು ನೀಡಿದರು.


ಕಾರ್ಯಕ್ರಮದಲ್ಲಿ ಕಲ್ಲಡ್ಕ ಶಾಲೆಯ ಮುಖ್ಯ ಶಿಕ್ಷಕ ಅಬುಬಕ್ಕರ್ ಅಶ್ರಫ್ ,ಸುಳ್ಯದ ತಾಲೂಕು ಅಧ್ಯಕ್ಷ ದೇವರಾಜ್ ,ಬೆಳ್ತಂಗಡಿ ತಾಲೂಕು ಅಧ್ಯಕ್ಷ ಬಾಲಕೃಷ್ಣ , ಪುತ್ತೂರು ತಾಲೂಕು ಕಾರ್ಯದರ್ಶಿ ತಾರನಾಥ್ ವೀರಮಂಗಲ, ಪಾಂಡವರಕಲ್ಲು ನವೀನಾ ಕುಮಾರಿ ,ಮದ್ವದ ಭವಾನಿ ,ಆನಂದ ಕೆಮ್ಮಾನುಪಲ್ಕೆ ,ಗೋಪಾಲ ಸುರಿಬೈಲು, ಶಿವರಾಮ್ ಭಟ್ ಮಿತ್ತನಡ್ಕ ,ಚಂದ್ರಾವತಿ ಮಾಣಿ ಮತ್ತು ಎಲ್ಲಾ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಾರಾಯಣ ಪೂಜಾರಿ ಎಸ್ ಕೆ ಸ್ವಾಗತಿಸಿ, ಪುಟ್ಟರಂಗನಾಥ ಟಿ ವಂದಿಸಿ,ಶ ದೇವಕಿ ಮೋಂತಿಮಾರು ಮತ್ತು ದಾಮೋದರ ಸರ್ಕಳ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here