ಬಂಟ್ವಾಳ : ಕನ್ಯಾನ ಗ್ರಾಮದ ವಿವಿದೆಡೆ 2ಕೋಟಿ 28ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿ ಉದ್ಘಾಟಿಸಿದರು.
ಬದಿಕೋಡಿ-ಶಿರಂಕಲ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು. ಬನಾರಿ ಗೋಪಾಲಕೃಷ್ಣ ದೇವಸ್ಥಾನ ರಸ್ತೆ, ಮಾಡದಾರು-ಅಶ್ವತ್ಥಕೋಡಿ ರಸ್ತೆ, ಮುದ್ಕುಂಜ ರಸ್ತೆ, ಪನೆಯಡ್ಕ ರಸ್ತೆ, ಕಾಣಿಚ್ಚಾರು ಧೂಮಾವತಿ ದೈವಸ್ಥಾನದ ರಸ್ತೆ, ಬಾಲ್ತ್ರೋಡಿ ರಸ್ತೆ, ಪರಕ್ಕಜೆ ರಸ್ತೆ, ಹಾಗೂ ಶ್ರೀ ಸರಸ್ವತಿ ವಿದ್ಯಾಲಯದ ರಸ್ತೆ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಇದೇ ವೇಳೆ ಕನ್ಯಾನ ಗ್ರಾಮದ ಬಿ.ಜೆ.ಪಿ. ಬೂತ್ ಸಮಿತಿಯ ಅಧ್ಯಕ್ಷರುಗಳ ಮನೆ ಮನೆಗೆ ಭೇಟಿ ನೀಡಿ ನಾಮಫಲಕ ಅಳವಡಿಸಿ ಕಾರ್ಯಕರ್ತರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನ್ಯಾನ ಶಕ್ತಿ ಕೇಂದ್ರದ ನಂದರಾಮ ರೈ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅದ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಕನ್ಯಾನ ಶಕ್ತಿಕೇಂದ್ರದ ಪ್ರಮುಖ್ ಉದಯ ರಮಣ ಭಟ್, ಸಹಪ್ರಮುಖ್ ಕುಮಾರ್ ಭಟ್ ಬದಿಕೋಡಿ, ಹಿರಿಯ ನಾಯಕ ಕೆ.ಪಿ. ರಘುರಾಮ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ. ಲಿಂಗಪ್ಪ ಗೌಡ, ಪಂಚಾಯತ್ ಉಪಾಧ್ಯಕ್ಷೆ ಕುಸುಮ, ಪಂಚಾಯತ್ ಸದಸ್ಯರಾದ ಮನೋಜ್ ಬನಾರಿ, ವನಿತ,ಕೊಳ್ನಾಡು ಮಹಾಶಕ್ತಿ ಕೇಂದ್ರದ ಸದಸ್ಯರಾದ ಧರ್ಣಮ್ಮ ಜೆ.ಪಿ.ಗೌಡ, ಕೃಷ್ಣ ಬನಾರಿ.ಹಾಗೂ ಕನ್ಯಾನ ಬೂತ್ ಸಮಿತಿಯ ಪಧಾದಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.