ಬಂಟ್ವಾಳ : ಜ.3ರಿಂದ ರಿಂದ 5ರ ವರೆಗೆ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕೇರಳ, ಕನ್ಯಾಕುಮಾರಿ ಪ್ರವಾಸದ ರೈಲು ಪ್ರಯಾಣದಲ್ಲಿ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಬಾಟಲಿಗಳಲ್ಲಿ, ಅವರು ಸೇವಿಸಿರುವ ಆಹಾರ ಪೊಟ್ಟಣಗಳ ಪ್ಲಾಸ್ಟಿಕನ್ನು ಸೇರಿಸಿ ‘ಪ್ಲಾಸ್ಟಿಕ್ ಬ್ರಿಕ್ಸ್’ಗಳನ್ನಾಗಿ ತಯಾರಿಸಿ ರೈಲು ಭೋಗಿಯಲ್ಲಿರುವ ಇತರ ಸಹ ಪ್ರಯಾಣಿಕರಿಗೂ ಪ್ಲಾಸ್ಟಿಕ್ ಬ್ರಿಕ್ಸ್‌ನ್ನು ತಯಾರಿಸುವುದರ ಪ್ರಾತ್ಯಕ್ಷಿಕೆ ನೀಡಿ,ಅದರ ಬಗ್ಗೆ ಅರಿವು ಮೂಡಿಸಿದರು. ಮಕ್ಕಳ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ. ಹಲವು ಪ್ರಯಾಣಿಕರು ಪ್ರೇರಿತರಾಗಿ ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಸಿಸಿದರು.
Home ವಿಶೇಷ ಸುದ್ದಿ ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ, ಶಾಲಾ ಶೈಕ್ಷಣಿಕ ಪ್ರವಾಸದಲ್ಲೊಂದು ವಿನೂತನ ಪ್ರಯೋಗ